ಉಡುಪಿ: ಇಲ್ಲಿನ ಮಲ್ಪೆಯಿಂದ ಹೊರಟ ಬೋಟ್ ಸಮೇತ ಏಳು ಮಂದಿ ಮೀನುಗಾರರ ನಾಪತ್ತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಉಡುಪಿಯ ಪೇಜಾವರಶ್ರೀ ಪತ್ರ ಬರೆದಿದ್ದಾರೆ. ಇತ್ತ 3 ರಾಜ್ಯಕ್ಕೆ 6 ಮಂದಿಯ ಪೊಲೀಸ್ ಟೀಂ ನಿಯೋಜಿಸಲಾಗಿದೆ.
ಮೀನುಗಾರರು ನಾಪತ್ತೆಯಾಗಿ ತಿಂಗಳು ಹತ್ತಿರವಾಗುತ್ತಿದೆ. ಶೀಘ್ರ ಪತ್ತೆಯಾಗುವಂತೆ ಕ್ರಮ ಕೈಗೊಳ್ಳಿ ಎಂದು ಪೇಜಾವರ ಶ್ರೀಗಳು ಪ್ರಧಾನಿಗೆ ಒತ್ತಾಯಿಸಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಕಾಣೆಯಾದ ಮೀನುಗಾರರ ಶೀಘ್ರ ಪತ್ತೆಗೆ ತಾವು ಕ್ರಮ ಕೈಗೊಳ್ಳಬೇಕು. ಉನ್ನತ ಮಟ್ಟದ ಎಲ್ಲಾ ತಂತ್ರಜ್ಞಾನ, ಸಾಮಥ್ರ್ಯ ಬಳಸುವಂತೆ ಪತ್ರದಲ್ಲಿ ಪೇಜಾವರಶ್ರೀ ಒತ್ತಾಯಿಸಿದ್ದಾರೆ.
Advertisement
Advertisement
ಸ್ವಾಮೀಜಿ ಪತ್ರ ಬರೆದು ಅದನ್ನು ಈಮೇಲ್ ಮೂಲಕ ರವಾನೆ ಮಾಡಿದ್ದಾರೆ. ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಗೆ ಪತ್ರದ ಪ್ರತಿಯನ್ನು ರವಾನೆ ಮಾಡಿದ್ದಾರೆ. ಇದನ್ನೂ ಓದಿ: ಮೀನುಗಾರರ ಪತ್ತೆಗೆ ಇಸ್ರೋ, ಗೂಗಲ್ ನೆರವು: ಸಚಿವ ವೆಂಕಟರಾವ್ ನಾಡಗೌಡ
Advertisement
ಪೊಲೀಸ್ ಟೀಂ:
ಅರಬ್ಬೀ ಸಮುದ್ರದಲ್ಲಿ ಏನಾದರೂ ಅವಘಡ ಸಂಭವಿಸಿ ಮೀನುಗಾರರು ನಾಪತ್ತೆಯಾಗಿರಬಹುದೇ ಎಂಬ ಆಯಾಮದಲ್ಲಿ ತನಿಖೆ ತೀವ್ರಗೊಳಿಸಲಾಗಿದೆ. ಉಡುಪಿ ಜಿಲ್ಲಾ ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ನಡೆಸಲು ಕೇರಳಕ್ಕೆ ಎರಡು ತಂಡಗಳನ್ನು ರವಾನಿಸಿದ್ದಾರೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ನಾಲ್ಕು ಟೀಂ ತೆರಳಿದ್ದು ಕಣ್ಮರೆಯಾದವರ ತನಿಖೆ ಮಾಡುತ್ತಿದೆ.
Advertisement
ಮಹಾರಾಷ್ಟ್ರದ ಮರಾಠಿ ಪತ್ರಿಕೆಯೊಂದರಲ್ಲಿ ಆಚ್ರಾ ಮತ್ತು ಮೆಲ್ವಾನ್ ನಲ್ಲಿ ಬೋಟಿನ ಟ್ರೇಗಳು ದೊರಕಿವೆ ಎಂದು ವರದಿಯಾಗಿತ್ತು. ಇವು ಸುವರ್ಣ ತ್ರಿಭುಜ ಬೋಟಿಗೆ ಸೇರಿದ ಟ್ರೇಗಳಾ ಎಂಬ ಬಗ್ಗೆ ತನಿಖೆ ತೀವ್ರಗೊಳಿಸಲಾಗಿದೆ. ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದ ಬಳಿಕ ಪ್ರಕರಣದ ಗಂಭೀರತೆ ಹೆಚ್ಚಿದ್ದು ಪೊಲೀಸರು ಶೀಘ್ರವೇ ಪ್ರಕರಣ ಬೇಧಿಸುವ ಒತ್ತಡದಲ್ಲಿದ್ದಾರೆ. ಇದನ್ನೂ ಓದಿ: ಮಲ್ಪೆ ಮೀನುಗಾರರು ಕಣ್ಮರೆ – ಆಡಿಯೋ ವೈರಲ್
ಗೋವಾ ಮೀನುಗಾರನದ್ದು ಎನ್ನಲಾದ ವಾಯ್ಸ್ ನೋಟ್ ನ ಜಾಡು ಹಿಡಿದಿರುವ ಪೊಲೀಸರು ಗೋವಾದಲ್ಲೂ ತನಿಖೆ ಆರಂಭಿಸಿದ್ದಾರೆ. ಮಹಾರಾಷ್ಟ್ರ ದಾಟಿ ಗೋವಾ ಗಡಿ ಕಡೆ ಸುವರ್ಣ ತ್ರಿಭುಜ ಬೋಟ್ ಹೋಗಿದ್ಯಾ? ಪಾಕ್ ಗಡಿಯಲ್ಲಿ ಬೋಟ್ ಅಪಹರಣವಾಯ್ತಾ ಆನ್ನೋ ಸಂಶಯವೂ ಮೀನುಗಾರರಿಂದ ಬಂದಿದ್ದು ಕೇಂದ್ರ ಗೃಹ ಇಲಾಖೆ ಈ ನಿಟ್ಟಿನಲ್ಲಿ ತನಿಖೆ ಶುರುಮಾಡಿದೆ.
ಡಿಸೆಂಬರ್13 ಕ್ಕೆ ಉಡುಪಿಯ ಮಲ್ಪೆಯಿಂದ ಸುವರ್ಣ ತ್ರಿಭುಜ ಬೋಟ್ ಮೀನುಗಾರಿಕೆಗೆ ತೆರಳಿದ್ದು, ಡಿ. 15 ರಿಂದ ಜಿಪಿಎಸ್- ಫೋನ್ ಸಂಪರ್ಕ ಕಡಿತಗೊಂಡಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv