ಧಾರವಾಡ: ಕಾಣೆಯಾಗಿದ್ದ ಬಾಲಕನೋರ್ವ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಧಾರವಾಡ (Dharawada) ತಾಲೂಕಿನ ನರೇಂದ್ರ ಗ್ರಾಮದಲ್ಲಿ ನಡೆದಿದೆ.
ನರೇಂದ್ರ (Naredra) ಗ್ರಾಮದ ಮೈಲಾರ ಹುಲಮನಿ (12) ಶವವಾಗಿ ಪತ್ತೆಯಾದ ಬಾಲಕ. ಮಂಗಳವಾರ ಮೈಲಾರ ಮನೆಯಿಂದ ಬಾಲಕ ನಾಪತ್ತೆಯಾಗಿದ್ದ. ಆತನಿಗಾಗಿ ಹುಡುಕಾಟ ಸಹ ನಡೆಸಲಾಗಿತ್ತು. ಆದರೆ, ಇಂದು (ಗುರುವಾರ) ಬೆಳಗಿನಜಾವ ಬಾಲಕ ಮೈಲಾರ, ನರೇಂದ್ರ ಗ್ರಾಮದ ದ್ಯಾಮಡ್ಡಿ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಸುವರ್ಣ ಮಹೋತ್ಸವ ಪ್ರಶಸ್ತಿ ಮೊತ್ತ 50 ಸಾವಿರದಿಂದ 1 ಲಕ್ಷಕ್ಕೆ ಏರಿಕೆ: ಶಿವರಾಜ್ ತಂಗಡಗಿ ಘೋಷಣೆ
ಘಟನಾ ಸ್ಥಳಕ್ಕೆ ಧಾರವಾಡ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಬಳಿಕ ಬಾಲಕನ ಶವವನ್ನು ಹೊರತೆಗೆದು ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ; ಗೋಡೌನ್‌ನಲ್ಲಿ ಶೇಖರಿಸಿಟ್ಟಿದ್ದ ಬಂಡಲ್‌ಗಟ್ಟಲೇ ಸೀರೆ, ಪಂಚೆ ಜಪ್ತಿ