ಅಮವಾಸ್ಯೆಯ ಹಿಂದಿನ ದಿನದಿಂದ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ

Public TV
0 Min Read
CTD CHAILD

ಚಿತ್ರದುರ್ಗ: ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆಯಾಗಿದ್ದು, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಡೂರು ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ಬಳಿಯ ಕಲ್ಲಿನ ಕ್ವಾರಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿದೆ. ಮಾರ್ಚ್ 16 ರಂದು ಬಾಲಕ ಅಭಿಲಾಷ್(04) ನಾಪತ್ತೆಯಾಗಿದ್ದನು.

CTD VAMACHARA BALI AV 5

ಕಡೂರು ಗ್ರಾಮದ ಚಂದ್ರಶೇಖರ್ ಎಂಬುವರ ಪುತ್ರ ಅಭಿಲಾಷ್ ಅಮಾವಾಸ್ಯೆ ಮುನ್ನಾದಿನ ನಾಪತ್ತೆಯಾಗಿದ್ದನು. ಆದರೆ 5 ದಿನದ ಬಳಿಕ ಇಂದು ಕಲ್ಲಿನ ಕ್ವಾರಿಯ ಬಳಿ ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ್ನು ಅಪಹರಿಸಿ ವಾಮಾಚಾರಕ್ಕೆ ಬಾಲಕನ ಬಲಿ ನೀಡಿರುವ ಶಂಕೆ ವ್ಯಕ್ತವಾಗಿದೆ.

ಈ ಘಟನೆ ಚಿಕ್ಕಜಾಜೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

 

Share This Article
Leave a Comment

Leave a Reply

Your email address will not be published. Required fields are marked *