ಬೀದರ್: ಹೈದರಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಸೋಮವಾರ ನಾಪತ್ತೆಯಾಗಿದ್ದ ಆರು ದಿನದ ಹೆಣ್ಣು ಮಗು ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಪತ್ತೆಯಾಗಿದೆ.
ಹೈದರಾಬಾದ್ ನ ಸುಲ್ತಾನ್ ಬಜಾರ್ ನಲ್ಲಿರುವ ಕೊಟ್ಟಿ ಆಸ್ಪತ್ರೆಯಲ್ಲಿ ಸಬಾವತ್ ನಾರಿ ಹಾಗೂ ವಿಜಯ ಎಂಬ ದಂಪತಿಗಳ ಮಗುವನ್ನ ಸೋಮವಾರ ಅಪಹರಣ ಮಾಡಲಾಗಿತ್ತು. ಈ ಬಗ್ಗೆ ಹೈದರಾಬಾದ್ ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ನವಜಾತ ಶಿಶುವಿನ ದಂಪತಿಗಳು ದೂರು ದಾಖಲಿಸಿದ್ದರು. ಮಗುವಿನ ಚಿಕಿತ್ಸೆಗೆಂದು ಆಸ್ಪತ್ರೆಗೆ ಬಂದಿದ್ದ ಮಹಿಳೆ ಕಂದನನ್ನು ತೆಗೆದುಕೊಂಡು ಹೋಗಿದ್ದು ತನಿಖೆಯಲ್ಲಿ ತಿಳಿದು ಬಂದಿತ್ತು.
Advertisement
Advertisement
ಆರೋಪಿ ಮಹಿಳೆ ಕಂದನನ್ನು ಕರೆದುಕೊಂಡು ಬೀದರ್ ನತ್ತ ಪ್ರಯಾಣ ಬೆಳೆಸಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಈಗಾಗಲೇ ಹೈದರಾಬಾದ್ ಬಸ್ ನಿಲ್ದಾಣದಲ್ಲಿ ಸಿಕ್ಕ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ನ್ನ ಆಧರಿಸಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದರು. ಮಂಗಳವಾರ ಆರೋಪಿ ಮಗುವನ್ನು ಬೀದರ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿಟ್ಟು ಪರಾರಿಯಾಗಿದ್ದಾಳೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಮಗುವನ್ನ ಪರಿಶೀಲಿಸದಾಗ ಹೈದ್ರಾಬಾದ್ ನಲ್ಲಿ ನಾಪತ್ತೆಯಾಗಿದ್ದ ಕಂದ ಎನ್ನವುದನ್ನು ಖಚಿತ ಪಡೆಸಿಕೊಂಡಿದ್ದಾರೆ.
Advertisement
ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಮುಂದುವರೆಸಲಾಗಿದೆ. ತೆಲಂಗಾಣ ಹಾಗೂ ಕರ್ನಾಟಕ ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ. ಬಳಿಕ ತೆಲಂಗಾಣ ಹಾಗೂ ರಾಜ್ಯ ಪೊಲೀಸರು ಜಂಟಿ ಸುದ್ದಿಗೋಷ್ಠಿ ಮಾಡಿದ್ದು ಎಸ್ಪಿ ದೇವರಾಜ್ ಮಾತನಾಡಿ ಮಗುವನ್ನ ಕದ್ದ ಆರೋಪಿಯ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಆರೋಪಿ ಯಾವ ಕಾರಣಕ್ಕಾಗಿ ಮಗು ಕದ್ದಿದ್ದಾಳೆ ಎನ್ನುವುದು ತಿಳಿಯಬೇಕಿದೆ. ಸದ್ಯ ತನಿಖೆ ಮುಂದುವರೆಸಲಾಗಿದೆ ತಿಳಿಸಿದರು.