ಕಾಣೆಯಾದ ನಟಿ ಊರ್ವಶಿ ರೌಟೇಲ್ ಖರೀದಿಸಿದ ₹190 ಕೋಟಿ ಬಂಗ್ಲೆ

Public TV
1 Min Read
urvashi rautela 1

ಬಾಲಿವುಡ್ ನಟಿ ಊರ್ವಶಿ ರೌಟೇಲ್ (Urvashi Rautela) ಮುಂಬೈನಲ್ಲಿ (Mumbai) 190 ಕೋಟಿ ರೂಪಾಯಿ ಬೆಲೆ ಬಾಳುವ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಬಿಟೌನ್ ನಲ್ಲಿ ಭಾರೀ ಸದ್ದು ಮಾಡಿತ್ತು. ದುಬಾರಿ ಬೆಲೆಯ ಬಂಗ್ಲೆಯನ್ನು ನಟಿಗೆ ಖರೀದಿಸಲು ಹೇಗೆ ಸಾಧ್ಯವಾಯಿತು ಎಂದು ಜನರು ಮಾತನಾಡಿಕೊಂಡರು. ಅದರಲ್ಲೂ ಪ್ರತಿಷ್ಠಿತ ಏರಿಯಾದಲ್ಲಿ ಬಂಗ್ಲೆ ಹೇಗೆ ಸಿಕ್ಕಿತು ಎನ್ನುವ ಮಾತು ಕೇಳಿ ಬಂತು. ಇದೆಲ್ಲದಕ್ಕೂ ಊರ್ವಶಿ ತಾಯಿ ಮೀರಾ ರೌಟೇಲ್ (Meera Rautela) ಉತ್ತರಿಸಿದ್ದಾರೆ.

urvashi rautela 2

ನನ್ನ ಮಗಳು 190 ಕೋಟಿ ರೂಪಾಯಿ ಬಂಗ್ಲೆ ಖರೀದಿಸಿದ್ದಾರೆ ಎನ್ನುವ ಸುದ್ದಿ ಕೇಳಿ ಅಚ್ಚರಿ ಆಯಿತು. ದಯವಿಟ್ಟು ಆ ಮನೆ ಎಲ್ಲಿದೆ ಎಂದು ಹುಡುಕಿಕೊಡಿ. ಅಲ್ಲದೇ, ನನ್ನ ಮಗಳು ಅಷ್ಟು ದುಬಾರಿ ಮನೆ ಖರೀದಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥಿಸಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು ಕಪೋಕಲ್ಪಿತ ಸುದ್ದಿ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಇದನ್ನೂ ಓದಿ:ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೇಟ್ ಡೇಟ್ ಫಿಕ್ಸ್

urvashi rautela 1

ಮುಂಬೈನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜುಹು ಪ್ರದೇಶದಲ್ಲಿ ಊರ್ವಶಿ ಮನೆ ಖರೀದಿಸಿದ್ದಾರೆ ಎಂದು ಮಾಧ್ಯಮಗಳು ಸುದ್ದಿ ಮಾಡಿದ್ದವು. ಅದರಲ್ಲೂ ಖ್ಯಾತ ನಿರ್ಮಾಪಕ ಯಶ್ ಚೋಪ್ರಾ (Yash Chopra) ಅವರ ಮನೆಯ ಹಿಂದೆಯೇ ಆ ಬಂಗ್ಲೆ ಇದೆ ಎಂದು ಸುದ್ದಿ ಹರಿಬಿಡಲಾಗಿತ್ತು. ಆ ಮನೆಗೆ ದುಬಾರಿ ಬೆಲೆಯನ್ನೂ ನಿಗದಿ ಮಾಡಲಾಗಿತ್ತು. ಇದೆಲ್ಲವೂ ಸುಳ್ಳು ಸುದ್ದಿ ಎಂದು ಊರ್ವಶಿ ತಾಯಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article