Connect with us

Latest

ಭಾರತಕ್ಕೆ ಮರಳಿದ ವಿಶ್ವ ಸುಂದರಿಗೆ ಸಿಕ್ತು ಅದ್ಧೂರಿ ಸ್ವಾಗತ: ಫೋಟೋಗಳಲ್ಲಿ ನೋಡಿ

Published

on

ಮುಂಬೈ: 108 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ 2017ರ ವಿಶ್ವ ಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡ ಮಾನುಷಿ ಛಿಲ್ಲರ್ ತಮ್ಮ ತವರಿಗೆ ಇಂದು ಮರಳಿದ್ದಾರೆ.

ವಿದೇಶದಲ್ಲಿ ಭಾರತ ಬೀಗುವಂತೆ ಮಾಡಿದ್ದ ಮಾನುಷಿ ಛಿಲ್ಲರ್ ಮೂಲತಃ ಹರ್ಯಾಣದವರಾಗಿದ್ದು, ಶನಿವಾರ ರಾತ್ರಿ ಸುಮಾರು 1 ಗಂಟೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರಿಗೆ ನಿಲ್ದಾಣದಲ್ಲಿ ಅದ್ಧೂರಿಯಾಗಿ ಸ್ವಾಗತ ಸಿಕ್ಕಿದೆ.

ಮಾನುಷಿ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಂತೆ ಸಾವಿರಾರು ಅಭಿಮಾನಿಗಳು ಅವರಿಗೆ ಕಾಯುತ್ತಿದ್ದರು. ಬಂದ ತಕ್ಷಣ ಅಭಿಮಾನಿಗಳು `ಇಂಡಿಯಾ, ಇಂಡಿಯಾ’ ಎಂದು ಹೆಮ್ಮೆಯಿಂದ ಕೂಗಿದ್ದಾರೆ. ಇನ್ನೂ ಕೆಲವರು ತ್ರಿವರ್ಣ ಧ್ವಜವನ್ನು ಹಿಡಿದ್ದರು. ಜೊತೆಗೆ ಮಾನುಷಿಯವರ ಪೋಸ್ಟರ್ ಹಿಡಿದು ಸಂತಸದಿಂದ ವಿಶ್ವ ಸುಂದರಿಯನ್ನು ಸ್ವಾಗತಿಸಿದ್ದಾರೆ. ಒಟ್ಟಿನಲ್ಲಿ ನಿಲ್ದಾಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದಂತಿತ್ತು.

“ನಮ್ಮ ದೇಶಕ್ಕೆ ಹಿಂದಿರುಗಿರುವುದು ನನಗೆ ತುಂಬಾ ಖುಷಿಯಾಗಿದೆ. ಅದ್ಧೂರಿಯಾಗಿ ಸ್ವಾಗತ ಕೋರಿದಕ್ಕೆ ತುಂಬಾ ಧನ್ಯವಾದಗಳು” ಎಂದು ಮಾನುಷಿ ಟ್ವೀಟ್ ಮಾಡಿ ತಮ್ಮ ಆನಂದವನ್ನು ವ್ಯಕ್ತಪಡಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಪೊಲೀಸ್ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿತ್ತು. ಚೀನಾದ ಸಾನ್ಯಾ ಸಿಟಿಯಲ್ಲಿ ಇದೇ ನವೆಂಬರ್ 18 ರಂದು ನಡೆದ ಮಿಸ್ ವಲ್ರ್ಡ್-2017 ಸ್ಪರ್ಧೆಯಲ್ಲಿ 21 ವರ್ಷದ ಮನುಷಿ ಛಿಲ್ಲರ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.

ಭಾರತದ ಮೆಡಿಕಲ್ ವಿದ್ಯಾರ್ಥಿನಿಯಾಗಿರುವ ಮನುಷಿ, 1994 ರಲ್ಲಿ ಐಶ್ವರ್ಯ ರೈ ಮಿಸ್ ವಲ್ರ್ಡ್ ಆಗಿ ಹೊರಹೊಮ್ಮಿದ್ದರು. ನಂತರ 1997ರಲ್ಲಿ ಡಯಾನಾ ಹೇಡನ್, 1999ರಲ್ಲಿ ಯುಕ್ತ ಮುಖಿ ಹಾಗೂ 2000 ರಲ್ಲಿ ಪ್ರಿಯಾಂಕಾ ಚೋಪ್ರಾ ಮಿಸ್ ವಲ್ರ್ಡ್ ಪಟ್ಟ ಅಲಂಕರಿಸಿದ್ದರು. ಇದೀಗ 17 ವರ್ಷಗಳ ಬಳಿಕ ಮಾನುಷಿ ಭಾರತಕ್ಕೆ ವಿಶ್ವಸುಂದರಿ ಪಟ್ಟ ತಂದಿದ್ದಾರೆ. ಭಾರತದಲ್ಲಿ 17 ವರ್ಷಗಳ ನಂತರ ಮಿಸ್ ವಲ್ರ್ಡ್ ಪಟ್ಟ ದಕ್ಕಿಸಿಕೊಟ್ಟಿದ್ದಾರೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.

ಇದನ್ನು ಓದಿ: ವಿಶ್ವಸುಂದರಿ ಮಾನುಷಿ ಚಿಲ್ಲರ್ ಮುಡಿಗೇರಿದ ಕಿರೀಟದ ಬೆಲೆ ಎಷ್ಟು ಗೊತ್ತಾ?

https://twitter.com/stregismumbai/status/934534893115138048

 

 

Click to comment

Leave a Reply

Your email address will not be published. Required fields are marked *