ನವದೆಹಲಿ: ಹಲವು ಸ್ಪರ್ಧಿಗಳಲ್ಲಿ ಕೋವಿಡ್-19 ದೃಢಪಟ್ಟಿರುವ ಹಿನ್ನೆಲೆಯಲ್ಲಿ ʻವಿಶ್ವ ಸುಂದರಿ 2021ʼ ಫೈನಲ್ ಸ್ಪರ್ಧೆಯನ್ನು ಮುಂದೂಡಲಾಗಿದೆ.
Advertisement
ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಮಾನಸಾ ವಾರಣಾಸಿ ಅವರಿಗೂ ಕೊರೊನಾ ಸೋಂಕು ತಗುಲಿರುವುದನ್ನು ಮಿಸ್ ಇಂಡಿಯಾ ಸಂಸ್ಥೆ ಖಚಿತಪಡಿಸಿದೆ. ಇದನ್ನೂ ಓದಿ: ಅರೆ ನಗ್ನ ಫೋಟೋ ಶೇರ್ ಮಾಡಿದ ನಟಿ ಇಲಿಯಾನಾ
Advertisement
Advertisement
View this post on Instagram
Advertisement
ಗುರುವಾರ ವಿಶ್ವ ಸುಂದರಿ ಸ್ಪರ್ಧೆ ನಡೆಯಬೇಕಿತ್ತು. ಆದರೆ 17 ಸ್ಪರ್ಧಿಗಳು ಮತ್ತು ಸಹಾಯಕ ಸಿಬ್ಬಂದಿಗೆ ಕೋವಿಡ್ ಪಾಸಿಟಿವ್ ಬಂದಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಸ್ಪರ್ಧೆಯನ್ನು ಮುಂದೂಡಲಾಗಿದೆ. ಸೋಂಕಿತ ಸ್ಪರ್ಧಿಗಳು ಸದ್ಯ ಪೋರ್ಟೊ ರಿಕೊದಲ್ಲಿ ಐಸೊಲೇಷನ್ ಆಗಿದ್ದಾರೆ.
PRESS STATEMENT: Miss World 2021 Postponed.
See announcement
https://t.co/J98KVc0Kpa pic.twitter.com/lHuLT6x8DV
— Miss World (@MissWorldLtd) December 16, 2021
ಸ್ಪರ್ಧಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಿಸ್ ವರ್ಲ್ಡ್ ಫೈನಲ್ ಸ್ಪರ್ಧೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ 90 ದಿನಗಳ ಒಳಗಾಗಿ ಸ್ಪರ್ಧೆಯನ್ನು ಪೋರ್ಟೊ ರಿಕೊದಲ್ಲೇ ಮರು ನಿಗದಿಪಡಿಸಲಾಗುವುದು ಎಂದು ಮಿಸ್ ವರ್ಲ್ಡ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಸ್ಟೈಲಿಶ್ ಲುಕ್‍ನಲ್ಲಿ ಶುಭಾ ಪೂಂಜಾ ಫುಲ್ ಮಿಂಚಿಂಗ್
ಸ್ಪರ್ಧಿಗಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ವಿಶ್ವ ಸುಂದರಿ ಫೈನಲ್ ಸ್ಪರ್ಧೆಯನ್ನು ಮುಂದೂಡಲಾಗಿದೆ. ಭಾರತದ ಸ್ಪರ್ಧಿ ಮಾನಸಾ ವಾರಣಾಸಿ ಅವರಿಗೂ ಸೋಂಕು ತಗುಲಿದ್ದು, ಪ್ರತ್ಯೇಕವಾಸದಲ್ಲಿದ್ದಾರೆ. ಕಠಿಣ ಪರಿಶ್ರಮ ಹಾಗೂ ಅರ್ಪಣಾ ಮನೋಭಾವದಿಂದ ಸಿದ್ಧತೆ ನಡೆಸಿದ್ದ ಆಕೆಗೆ ಫೈನಲ್ ಸ್ಪರ್ಧೆಯಲ್ಲಿ ಅವಕಾಶ ಕೈತಪ್ಪುವ ಆತಂಕ ಎದುರಾಗಿತ್ತು. ಆದರೆ ಸ್ಪರ್ಧಿಗಳ ಆರೋಗ್ಯ ಹಿತದೃಷ್ಟಿಯಿಂದ ಸ್ಪರ್ಧೆ ಮುಂದೂಡಲಾಗಿದೆ. ಅದಕ್ಕಾಗಿ ಮಿಸ್ ವರ್ಲ್ಡ್ ಲಿಮಿಟೆಡ್ ಸಿಇಒ ಜೂಲಿಯಾ ಮಾರ್ಲೆ ಅವರಿಗೆ ಅಭಿನಂದನೆ. ಕೊರೊನಾ ಸೋಂಕಿತರೆಲ್ಲರೂ ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇವೆ ಎಂದು ಮಿಸ್ ಇಂಡಿಯಾ ಸಂಸ್ಥೆ ತಿಳಿಸಿದೆ.