ಹೈದರಾಬಾದ್: ಥಾಯ್ಲೆಂಡ್ನ ಒಪಾಲ್ ಸುಚಾತಾ ಚೌಂಗಶ್ರೀ (Opal Suchata Chuangsri) ಅವರು 72ನೇ ಆವೃತ್ತಿಯ ವಿಶ್ವ ಸುಂದರಿ (Miss World) ಕಿರೀಟ ಮುಡಿಗೇರಿಸಿಕೊಂಡಿದ್ದು, ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ‘ರನ್ನರ್ ಅಪ್’ ಆಗಿ ಹೊರಹೊಮ್ಮಿದ್ದಾರೆ.
ಶನಿವಾರ ಸಂಜೆ ಹೈದರಾಬಾದ್ನ (Hyderabad) ಹೈಟೆಕ್ ಎಕ್ಸಿಬಿಷನ್ ಸೆಂಟರ್ನಲ್ಲಿ ನಡೆದ 72ನೇ ಆವೃತ್ತಿಯ ವಿಶ್ವಸುಂದರಿ ಸ್ಪರ್ಧೆಯ ಗ್ರಾಂಡ್ ಫಿನಾಲೆಯಲ್ಲಿ ಸುಚಾತಾ ಕಿರೀಟ ತಮ್ಮದಾಗಿಸಿಕೊಂಡರು. ಇನ್ನೂ ಭಾರತವನ್ನು ಪ್ರತಿನಿಧಿಸಿದ ನಂದಿನಿ ಗುಪ್ತಾ ಅವರು ಅಗ್ರ 8ರಲ್ಲಿ ಸ್ಥಾನ ಪಡೆಯುವ ಮುನ್ನವೇ ಹೊರಬಿದ್ದರು. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
ವಿಜೇತರಿಗೆ 1 ಮಿಲಿಯನ್ ಡಾಲರ್ ಅಂದರೆ ಸುಮಾರು 8 ಕೋಟಿ ರೂ. ಬೆಲೆ ಬಾಳುವ ವಜ್ರದ ಕಿರೀಟ ಅವರ ಮುಡಿಗೆ ಸಿಂಗರಿಸಲಾಯಿತು. ಇಥಿಯೋಪಿಯಾದ ಹಾಸೆಟ್ ಡೆರೆಜ್ ಅದ್ಮಾಸ್ಸು ಮೊದಲ ರನ್ನರಪ್ ಆದ್ರೆ, ಪೋಲೆಂಡಿನ ಪೊಲ್ಯಾಂಡ್ನ ಸುಂದರಿ 2ನೇ ರನ್ನರ್ ಅಪ್ ಹಾಗೂ ಕೆರೆಬಿಯನ್ ದ್ವೀಪದ ಸುಂದರಿ 3ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ವಿವಿಧ ದೇಶಗಳಿಂದ ಒಟ್ಟು 108 ಸ್ಪರ್ಧಿಗಳು ಭಾಗವಹಿಸಿದ್ದರು. ಕಳೆದ ಒಂದು ತಿಂಗಳಿನಿಂದ ವಿವಿಧ ಸುತ್ತುಗಳಲ್ಲಿ ಈ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇದನ್ನೂ ಓದಿ: ಪಾಕ್ ದಾಳಿಯಿಂದ ನಮ್ಮ ಫೈಟರ್ ಜೆಟ್ಗಳಿಗೂ ಹಾನಿ? – ಮೊದಲ ಬಾರಿಗೆ ಸಿಡಿಎಸ್ ಪ್ರತಿಕ್ರಿಯೆ ಏನು?
ಅಮೆರಿಕ ಮತ್ತು ಕೆರಿಬಿಯನ್, ಯುರೋಪ್, ಏಷ್ಯಾ ಹಾಗೂ ಓಸಿನಿಯಾ ಎಂಬ ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಿಂದ ಒಂದು ವಿಭಾಗದಿಂದ 10 ಜನರನ್ನು ಸೆಮಿಫೈನಲ್ಸ್ಗೆ ಆಯ್ಕೆ ಮಾಡಲಾಗಿತ್ತು. ನಂತರ ಒಂದು ವಿಭಾಗದಿಂದ 4 ಜನರಂತೆ 16 ಸ್ಪರ್ಧಿಗಳನ್ನು ಫೈನಲ್ಗೆ ಆಯ್ಕೆಮಾಡಲಾಗಿತ್ತು. ಅದರಲ್ಲಿ ಟಾಪ್ 8 ಹಾಗೂ ಫೈನಲ್ ನಡೆಯುತ್ತದೆ. ವಿಶ್ವ ಸುಂದರಿಯ ಜೊತೆಗೆ ಫೈನಲ್ ಪ್ರವೇಶಿಸಿದ ಮೂವರಿಗೆ ರನ್ನರ್ ಅಪ್ ಸ್ಥಾನ ಲಭಿಸಿದೆ.
ಗ್ರಾಂಡ್ ಫಿನಾಲೆಯ ನಿರೂಪಣೆಯನ್ನು 2016ರ ವಿಶ್ವ ಸುಂದರಿ ಸ್ಪರ್ಧೆಯ ವಿಜೇತೆ ಸ್ಟೆಫನಿ ಡೆಲ್ ವ್ಯಾಲೆ ನಡೆಸಿಕೊಟ್ಟರು. ಅವರೊಂದಿಗೆ ಭಾರತದ ಸಚಿನ್ ಕುಂಬಾರ್ ಇದ್ದರು. ಕಾರ್ಯಕ್ರಮದಲ್ಲಿ 2017ರಲ್ಲಿ ವಿಶ್ವ ಸುಂದರಿಯಾಗಿದ್ದ ಮಾನುಶಿ ಚಿಲ್ಲರ್, ಬಾಲವುಡ್ ನಟ ಸೋನು ಸೂದ್ ಸೇರಿದಂತೆ ಹಲವು ನಟ – ನಟಿಯರು ಭಾಗವಹಿಸಿದ್ದರು.