ಸಾವು-ಬದುಕಿನ ಮಧ್ಯೆ ಹೋರಾಡ್ತಿದ್ದ ಮಿಸ್ ವೆನೆಜುವೆಲಾ ದುರ್ಮರಣ

Public TV
1 Min Read
Ariana Viera

ಕಾರಕ್ಕಾಸ್: ವೆನೆಜುವೆಲಾ ರೂಪದರ್ಶಿ (Miss Venezuela) ಅರಿಯಾನ ವಿಯೆರಾ (26) ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

ಜುಲೈ 13ರಂದು ಒರ್ಲಾಂಡೋದಲ್ಲಿ ವಿಯೆರಾ (Ariana Viera) ಅವರ ಕಾರು ಟ್ರಕ್‍ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಇದೀಗ ಚಿಕಿತ್ಸೆ ಫಲಿಸದೇ ವಿಯೆರಾ ಇಹಲೋಕ ತ್ಯಜಿಸಿದ್ದಾರೆ.

ಅಪಘಾತದ ಸುಮಾರು 10 ದಿನಗಳ ನಂತರ ವಿಯೆರಾ ಅವರ ತಾಯಿ ವೆನೆಜುವೆಲಾದ ಚಾನೆಲ್ ಒಂದರ ಜೊತೆ ಮಾತನಾಡುತ್ತಾ ಮಗಳ ಅಪಘಾತದ ಕುರಿತು ಪ್ರತಿಕ್ರಿಯಿಸಿದರು. ಘಟನೆ ನಡೆದ ಸಂದರ್ಭದಲ್ಲಿ ಸ್ವತಃ ಮಗಳೇ ಕಾರು ಚಲಾಯಿಸುತ್ತಿದ್ದು, ಆಯಾಸಗೊಂಡಿದ್ದಳು. ಹೀಗಾಗಿ ನಿದ್ದೆ ಮಂಪರಿನಲ್ಲಿ ಅವಘಡ ಸಂಭವಿಸಿದೆ ಎಂದು ಅವರು ತಿಳಿಸಿದರು.  ಇದನ್ನೂ ಓದಿ: ಮಗುವನ್ನು ನೋಡಲೆಂದು ಪತ್ನಿ ಮನೆಗೆ ಹೋದಾಗ ಹಲ್ಲೆಗೈದು ಹಲ್ಲು ಕಿತ್ತ ಮಾವ!

ಅಕ್ಟೋಬರ್‍ನಲ್ಲಿ ಡೊಮಿನಿಕನ್ ರಿಪಬ್ಲಿಕ್‍ನಲ್ಲಿ ನಡೆಯುತ್ತಿರುವ ಮಿಸ್ ಲ್ಯಾಟಿನ್ ಅಮೆರಿಕ ಆಫ್ ದಿ ವಲ್ರ್ಡ್ 2023 ಸ್ಪರ್ಧೆಯಲ್ಲಿ ಅವರು ತಮ್ಮ ದೇಶವನ್ನು ಪ್ರತಿನಿಧಿಸಬೇಕಿತ್ತು. ಈಕೆ ಕೇವಲ ರೂಪದರ್ಶಿ, ನಟಿ ಮಾತ್ರವಲ್ಲದೇ 2023ರ ‘ಮಿಸ್ ವೆನೆಜುವೆಲಾ’ ಆಗಿದ್ದರು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article