ಡಿಸೆಂಬರ್ 12 ರಂದು ನಡೆದ ಮಿಸ್ ಯುನಿವರ್ಸ್ 2021 ಸ್ಪರ್ಧೆಯಲ್ಲಿ ಭಾರತೀಯ ಯುವತಿ ಹರ್ನಾಜ್ ಸಂಧು ಕಿರೀಟ ಅಲಂಕರಿಸಿದ್ದಾರೆ. ಭಾರತದ ನಾರಿ ಗೆದ್ದ ಕಿರೀಟದ ಬೆಲೆ ಬರೋಬ್ಬರಿ 37 ಕೋಟಿ ರೂ.
ಹೌದು. ಈ ಹಿಂದೆ ನಡೆದಿರುವ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಹಲವು ಬಾರಿ ಕಿರೀಟಗಳನ್ನು ಬದಲಿಸಲಾಗಿದೆ. 2019ರಲ್ಲಿ ಮಿಸ್ ಯುನಿವರ್ಸ್ ಸಂಸ್ಥೆ ಕಿರೀಟವನ್ನು ವಿನ್ಯಾಸ ಗೊಳಿಸಲು ಮೌವದ್ ಆಭರಣ ಕಂಪನಿಯನ್ನು ಆಯ್ಕೆ ಮಾಡಿತ್ತು. ಮಹಿಳಾ ಸಬಲೀಕರಣ, ಶಕ್ತಿ, ಸಮುದಾಯಗಳನ್ನು ಒಂದುಗೂಡಿಸುವಂತಹ ಮಿಸ್ ಯುನಿವರ್ಸ್ ಸಂಸ್ಥೆಗೆ ಮೌವದ್ ವಿನ್ಯಾಸಕರು ಪವರ್ ಆಫ್ ಯುನಿಟ್ ಕ್ರೌನ್ ಅನ್ನು ತಯಾರಿಸಿದ್ದರು.
Advertisement
Advertisement
ಈ ಕಿರೀಟದ ಬೆಲೆ 5 ಮಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಎಂದರೆ ಬರೋಬ್ಬರಿ 37 ಕೋಟಿ ರೂ. ಹಾಗೂ ಇದು ವಿಶ್ವದ ಅತ್ಯಂತ ದುಬಾರಿ ಸೌಂದರ್ಯ ಸ್ಪರ್ಧೆಯ ಕಿರೀಟ ಎಂಬುದಾಗಿಯೂ ದಾಖಲೆಯಾಗಿದೆ. ಇದನ್ನೂ ಓದಿ: 21 ವರ್ಷಗಳ ನಂತ್ರ ಭಾರತಕ್ಕೆ ವಿಶ್ವಸುಂದರಿ ಪಟ್ಟ- ಹರ್ನಾಜ್ ಕೌರ್ ಸಂಧು ಮಿಸ್ ಯೂನಿವರ್ಸ್
Advertisement
ಈ ಕಿರೀಟ ಮಹತ್ವಾಕಾಂಕ್ಷೆ, ವೈವಿಧ್ಯತೆ, ಸಮುದಾಯ ಹಾಗೂ ಸೌಂದರ್ಯದ ಸಂಕೇತವಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾದ ಜೊಜಿಬಿನಿ ತುಂಜಿ, 2020ರಲ್ಲಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ಈ ವಿಶ್ವದ ದುಬಾರಿ ಕಿರೀಟವನ್ನು ತೊಟ್ಟಿದ್ದು, ಇದೀಗ ಭಾರತದ ಹೆಮ್ಮೆಯ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
Advertisement
View this post on Instagram
ಕಿರೀಟದಲ್ಲಿ 1,725 ಬಿಳಿ ವಜ್ರಗಳು ಹಾಗೂ ಮೂರು ಗೋಲ್ಡನ್ ಕ್ಯಾನರಿ ವಜ್ರಗಳಿವೆ. ವಿನ್ಯಾಸದಲ್ಲಿ ಕಾಣಿಸುವ ಹೆಣೆದ ಬಳ್ಳಿ, ಎಲೆ, ದಳಗಳು ಏಳು ಖಂಡಗಳ ಸಮುದಾಯವನ್ನು ಪ್ರತಿನಿಧಿಸುತ್ತದೆ. ಕಿರೀಟದ ಮಧ್ಯಭಾಗದ ಗೋಲ್ಡನ್ ಕ್ಯಾನರಿ ವಜ್ರ 62.83 ಕ್ಯಾರೆಟ್ ತೂಕ ಹೊಂದಿದೆ. ಇದನ್ನೂ ಓದಿ: ನನ್ನ ತಮ್ಮನಿಗೆ ತಿಂಡಿ ತಿನ್ನಿಸಲು ಬಿಡಿ – ಐರಾ, ಯಥರ್ವ್ ಕ್ಯೂಟ್ ವೀಡಿಯೋ ವೈರಲ್
ಹರ್ನಾಜ್ ಸಂಧು ಸದ್ಯ ಈ ದುಬಾರಿ ಕಿರೀಟಕ್ಕೆ ಒಡತಿಯಾಗಿದ್ದು, ಸುಶ್ಮಿತಾ ಸೇನ್, ಲಾರ ದತ್ತಾರ ನಂತರ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸಿದ ಮೂರನೇ ಭಾರತೀಯ ಮಹಿಳೆಯಾಗಿದ್ದಾರೆ.