– ಘಟನೆಯಿಂದ ಆತ್ಮವಿಶ್ವಾಸ ಬಂದಿದೆ
ಅಟ್ಲಾಂಟಾ: ಅಮೆರಿಕದ ಅಟ್ಲಾಂಟಾದಲ್ಲಿ ನಡೆದ ಮಿಸ್ ಯೂನಿವರ್ಸ್-2019 ಸ್ಪರ್ಧೆಯ ಸಂದರ್ಭದಲ್ಲಿ, ಅನೇಕ ಸ್ಪರ್ಧಿಗಳು ಬಿಕಿನಿ ಸುತ್ತಿನಲ್ಲಿ ಒದ್ದೆಯಾದ ನೆಲದ ಮೇಲೆ ಜಾರಿಬಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಫ್ರಾನ್ಸ್ ಪ್ರತಿನಿಧಿಸಿದ್ದ ಮಿಸ್ ಮೇವಾ ಕೂಕಾ ಕೂಡ ರ್‍ಯಾಂಪ್ ಮೇಲೆ ಜಾರಿ ಬಿದ್ದರು. ಈ ವಿಡಿಯೋವನ್ನು ಸ್ವತಃ ಮೇವಾ ಕೂಕಾ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯು ಜೀವನದಲ್ಲಿ ಕೆಳಗೆ ಬೀಳುವುದು ಅತ್ಯಂತ ಮುಖ್ಯವಾದ ವಿಷಯ ಎನ್ನುವುದು ಘಟನೆಯಿಂದ ನನಗೆ ತಿಳಿಯುವಂತಾಗಿದೆ ಎಂದು ಬರೆದುಕೊಂಡಿದ್ದಾರೆ. ಮೇವಾ ಕೂಕಾ 2018ರಲ್ಲಿ ಮಿಸ್ ವರ್ಲ್ಡ್ ಆಗಿದ್ದರು.
Advertisement
https://www.instagram.com/p/B5zubWiiVSt/?utm_source=ig_embed
Advertisement
ಒದ್ದೆಯಾದ ರ್‍ಯಾಂಪ್ ಮೇಲೆ ಮಿಸ್ ಉರುಗ್ವೆ, ಮಿಸ್ ಇಂಡೋನೇಷ್ಯಾ, ಮಿಸ್ ಮಲೇಷ್ಯಾ, ಮಿಸ್ ನ್ಯೂಜಿಲೆಂಡ್, ಮಿಸ್ ಮಾಲ್ಟಾ ವಾಕ್ ಮಾಡಿ ಸೈ ಎನಿಸಿಕೊಂಡರು. ಆದರೆ ಮಿಸ್ ಫ್ರಾನ್ಸ್ ಕೊನೆಯ ಹಂತದಲ್ಲಿ ಸಮತೋಲನ ಕಳೆದುಕೊಂಡು ಜಾರಿ ಬಿದ್ದರು. ಕೆಳಗೆ ಬಿದ್ದ ಮೇಲೂ ಮಿಸ್ ಫ್ರಾನ್ಸ್‌ನ ಆತ್ಮವಿಶ್ವಾಸ ಕಡಿಮೆಯಾಗಲಿಲ್ಲ. ಅವರು ನಗುತ್ತಲೇ ಮೇಲೆದ್ದು ತೀರ್ಪುಗಾರರಿಗೆ ಚಪ್ಪಾಳೆ ತಟ್ಟಿ, ಹಿಂದಿರುಗಿದರು. ಅವರ ವಿಶ್ವಾಸಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Advertisement
68ನೇ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ದಕ್ಷಿಣ ಆಫ್ರಿಕಾದ ಜೋಜಿಬಿನಿ ತುಂಜಿ ಭಾನುವಾರ ಗೆದ್ದುಕೊಂಡಿದ್ದಾರೆ. ಪೋರ್ಟೊ ರಿಕೊದ ಮ್ಯಾಡಿಸನ್ ಆಂಡರ್ಸನ್ ಮೊದಲ ರನ್ನರ್ ಅಪ್ ಆಗಿದ್ದರೆ, ಮೆಕ್ಸಿಕೊದ ಸೋಫಿಯಾ ಅರಾಗೊನ್ ಎರಡನೇ ರನ್ನರ್ ಅಪ್ ಆಗಿದ್ದಾರೆ. ಭಾರತವನ್ನು ಪ್ರತಿನಿಧಿಸಿದ್ದ 26 ವರ್ಷದ ವರ್ತಿಕಾ ಸಿಂಗ್ ಅವರು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ 90 ದೇಶದ ಪ್ರತಿನಿಧಿಗಳು ಭಾಗವಹಿಸಿದ್ದರು.
Advertisement
https://www.instagram.com/p/B5ygN-2ijVh/?utm_source=ig_embed