`ಮಿಸ್ ಯೂನಿವರ್ಸ್ 2022′ (Miss Universe 2022) ಪಟ್ಟ ಈ ಬಾರಿ ಅಮೆರಿಕದ ಪಾಲಾಗಿದೆ. 88 ದೇಶದ ಸುಂದರಿಯರಿಗೆ ಸೆಡ್ಡು ಹೊಡೆದು ಬೊನ್ನೀ ಗ್ಯಾಬ್ರಿಯಲ್ ನೂತನ ವಿಶ್ವ ಸುಂದರಿಯಾಗಿ ಹೊರಹೊಮ್ಮಿದ್ದಾರೆ. ಈ ಪಟ್ಟ ಗಿಟ್ಟಿಸಿಕೊಳ್ಳಲು ಗ್ಯಾಬ್ರಿಯಲ್ ಕೊಟ್ಟ ಉತ್ತರದಿಂದ ಸಕ್ಸಸ್‌ಗೆ ದಾರಿ ಮಾಡಿಕೊಟ್ಟಿದೆ.
Advertisement
ಕಳೆದ ವರ್ಷದ ಮಿಸ್ ಯೂನಿವರ್ಸ್ ಕಿರೀಟ ಗೆದ್ದಿದ್ದ ಭಾರತದ ಹರ್ನಾಜ್ ಸಂಧು ವಿಜಯದ ಕಿರೀಟ ಮುಡಿಗೇರಿಸಿಕೊಂಡಿದ್ದರು. ಈ ವರ್ಷ ಅಮೆರಿಕದ ಸುಂದರಿಗೆ ವಿಶ್ವ ಸುಂದರಿ ಪಟ್ಟ ದಕ್ಕಿದೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?
Advertisement
View this post on Instagram
Advertisement
2022ರ ಸೌಂದರ್ಯ ಸ್ಪರ್ಧೆಯಲ್ಲಿ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿದ್ದ ದಿವಿತಾ ರೈ ಟಾಪ್ 16ರಲ್ಲಿ ಸ್ಥಾನ ಪಡೆದು ಗೆಲುವಿನ ನಿರೀಕ್ಷೆ ಮೂಡಿಸಿದರೂ, ಆ ನಂತರದ ಆಯ್ಕೆ ಪ್ರಕ್ರಿಯೆಯಲ್ಲಿ ಕಿರೀಟ ಗೆಲ್ಲುವ ನಿರೀಕ್ಷೆಯನ್ನು ಕೈಚೆಲ್ಲಿಬಿಟ್ಟರು. ಭಾರತ ಮತ್ತೊಮ್ಮೆ ಮಿಸ್ ಯೂನಿವರ್ಸ್ ಕಿರೀಟ ಗೆಲ್ಲಲಿದೆ ಎಂಬ ಭಾರತೀಯರ ನಿರೀಕ್ಷೆ ಹುಸಿಯಾಯಿತು. ಟಾಪ್ 3ಗೆ ಬಂದಿದ್ದ ಮಿಸ್ ಅಮೆರಿಕ, ಅಂತಿಮವಾಗಿ ಪ್ರಶ್ನೊತ್ತರ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಬೊನ್ನೀ ಗ್ಯಾಬ್ರಿಯಲ್ (R.Bonney Gabriel) ತಮ್ಮ ಜಾಣ್ಮೆಯ ಉತ್ತರ ನೀಡಿದ್ದಾರೆ. ಈ ಮೂಲಕ ನೂತನ ವಿಶ್ವಸುಂದರಿಯಾಗಿ ಹೊರಹೊಮ್ಮಿದ್ದರು.
Advertisement
ವಿಶ್ವಸುಂದರಿ ಸ್ಪರ್ಧೆಯಲ್ಲಿ ಮಿಸ್ ಅಮೆರಿಕ ಆರ್ ಬೊನ್ನಿ ಗ್ಯಾಬ್ರಿಯೆಲಾರಿಗೆ, ನೀವು ಮಿಸ್ ಯೂನಿವರ್ಸ್ ಕಿರೀಟ ಗೆದ್ದರೆ ಇದೊಂದು ಸಬಲೀಕರಣದ ಮತ್ತು ಪ್ರಗತಿಪರ ವೇದಿಕೆ ಎಂಬುದನ್ನು ಬಿಂಬಿಸಲು ಹೇಗೆ ಕೆಲಸ ಮಾಡುತ್ತಿರಿ ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನನಗೆ ಅಂಥ ಅವಕಾಶ ಸಿಕ್ಕರೆ ನಾನು ಅದನ್ನು ಪರಿವರ್ತನೆಯ ನಾಯಕತ್ವವಾಗಿ ಬಳಸುವೆ. ಕಳೆದ 13 ವರ್ಷಗಳಿಂದ ಪ್ಯಾಷನ್ ಡಿಸೈನರ್ ಆಗಿರುವ ನಾನು ಫ್ಯಾಷನ್‌ನ್ನು ಸದಾ ಉತ್ತಮ ಕಾರ್ಯಕ್ಕಾಗಿ ಬಳಸಿದ್ದೆನೆ. ನನ್ನ ಉದ್ಯಮದಲ್ಲಿ ನಾನು ಮರುಬಳಕೆಯ ಬಟ್ಟೆಗಳಿಗೆ ಆದ್ಯತೆ ನೀಡಿ ಮಾಲಿನ್ಯ ಕಡಿಮೆ ಮಾಡುತ್ತಿದ್ದೇನೆ. ಮಾನವ ಕಳ್ಳ ಸಾಗಣಿಕೆ ಮತ್ತು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಹೊಲಿಗೆ ತರಗತಿಗಳನ್ನು ನಡೆಸುತ್ತಿದ್ದೇನೆ. ನಮ್ಮಲ್ಲಿರುವ ಪ್ರತಿಭೆಯನ್ನು ನಾವು ಇತರರ ಉದ್ಧಾರಕ್ಕಾಗಿ ಬಳಸಬೇಕು ಎಂದು ಗ್ಯಾಬ್ರಿಯಲ್ ಮಾತನಾಡಿದ್ದಾರೆ.
ಮಿಸ್ ಅಮೆರಿಕ ಅವರ ಜಾಣ್ಮೆಯ ಉತ್ತರಕ್ಕೆ ನೆಟ್ಟಿಗರು ಭೇಷ್ ಎಂದಿದ್ದಾರೆ. ಈ ಮೂಲಕ ವಿಶ್ವಸುಂದರಿಯ ಪಟ್ಟವನ್ನ ಬೊನ್ನೀ ಗ್ಯಾಬ್ರಿಯೆಲಾ ತಮ್ಮದಾಗಿಸಿಕೊಂಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k