ಮಗನನ್ನು ಪರಿಚಯಿಸಿದ ಮಿಸ್ ಮ್ಯಾಚ್ ನಟಿ ಮಹಾಲಕ್ಷ್ಮಿ

Public TV
2 Min Read
Mahalakshmi

ಡೂತಿ ನಿರ್ಮಾಪಕ ರವೀಂದರ್ ಅವರನ್ನು ಮದುವೆ ಆಗುವ ಮೂಲಕ ಸಖತ್ ಟ್ರೋಲ್ ಆಗಿದ್ದ ನಟಿ ಮಹಾಲಕ್ಷ್ಮೀ (Mahalakshmi), ಇದೀಗ ಮಗನ (son) ಕಾರಣದಿಂದಾಗಿ ಮತ್ತೆ ಟ್ರೋಲ್ ಆಗಿದ್ದಾರೆ. ಮೊದಲ ಗಂಡನೊಂದಿಗೆ ಇದ್ದಾಗ ಆಗಿದ್ದ ಮಗನನ್ನು ಸೋಷಿಯಲ್ ಮೀಡಿಯಾ ಮೂಲಕ ಪರಿಚಯಿಸಿದ್ದಾರೆ ಮಹಾಲಕ್ಷ್ಮಿ. ಮಗನನ್ನು ನೋಡಿದ ನೆಟ್ಟಿಗರು ಇಷ್ಟು ದೊಡ್ಡ ಮಗನಾ ನಿಮಗೆ ಎಂದು ಉದ್ಘಾರ ತೆಗೆದಿದ್ದಾರೆ.

ravindra mahalakshmi 4

ಪ್ರೀತಿ ಕುರುಡು ಅಂತಾರೆ. ನಿರ್ಮಾಪಕ ರವೀಂದರ್ (Ravinder) ಮತ್ತು ನಟಿ ಮಹಾಲಕ್ಷ್ಮೀ ಬದುಕಿನಲ್ಲಿ ಅಕ್ಷರಶಃ ಅದು ನಿಜವಾಗಿದೆ. ವಯಸ್ಸಿನ ಅಂತರ, ಬ್ಯೂಟಿ, ತೂಕ ಎಲ್ಲವನ್ನೂ ಮೀರಿ ಇಬ್ಬರ ಬದುಕಿನಲ್ಲಿ ಪ್ರೇಮ್ ಕಹಾನಿ ಗೆದ್ದಿದೆ. ಹಾಗಾಗಿಯೇ ಇಬ್ಬರೂ ಸಪ್ತಪದಿ ತುಳಿದು ಸತಿಪತಿಯಾಗಿದ್ದಾರೆ. ಕೆಲವರಂತೂ ಈ ಮದುವೆಯ ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಇದೊಂದು ಮಿಸ್ ಮ್ಯಾಚ್ (miss match) ಮದುವೆ ಎಂದು ಗೇಲಿ ಮಾಡಿದ್ದರು. ಈ ಬಗ್ಗೆ ಮಹಾಲಕ್ಷ್ಮಿಯಾಗಲಿ, ರವೀಂದರ್ ಆಗಲಿ ತಲೆ ಕೆಡಿಸಿಕೊಂಡಿಲ್ಲ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

ravindra mahalakshmi 2

ರತಿಯಂತಿರುವ ಮಹಾಲಕ್ಷ್ಮೀ, ಸಮ ತೂಗುವ ರವೀಂದರ್ ಜೊತೆ ಮದುವೆ ಆಗಿದ್ದು ಹೇಗೆ? ಇಬ್ಬರೂ ಒಪ್ಪಿಗೆ ಸೂಚಿಸಿದ್ದು ಯಾವಾಗ? ಯಾರು ಮೊದಲು ಪ್ರಪೋಸ್ ಮಾಡಿದ್ದು ಹೀಗೆ ಹಲವಾರು ಪ್ರಶ್ನೆಗಳು ಜನರಲ್ಲಿ ಮೂಡಿದ್ದವು. ಈ ಎಲ್ಲದಕ್ಕೂ ಮಹಾಲಕ್ಷ್ಮಿ ಉತ್ತರ ಕೊಟ್ಟಿದ್ದರು. ನನ್ನ ಹೃದಯ ಕದ್ದಿದ್ದೀಯಾ, ಜೋಪಾನವಾಗಿಟ್ಟುಕೊ ಎಂದು ಹೇಳುವ ಮೂಲಕ ಮೊದಲು ಪ್ರಪೋಸ್ ಮಾಡಿದ್ದು ರವೀಂದರ್ ಎನ್ನುವುದನ್ನು ಗುಟ್ಟು ರಟ್ಟು ಮಾಡಿದ್ದರು.

MAHALAKSHMI RAVEENDER

ಈ ಜೋಡಿಯ ಲವ್ ಕಹಾನಿ ಶುರುವಾಗಿದ್ದೇ ಒಂದು ಇಂಟ್ರಸ್ಟಿಂಗ್ ಸ್ಟೋರಿ. ಮಹಾಲಕ್ಷ್ಮಿ ಕೇವಲ ನಿರೂಪಕಿ ಮಾತ್ರವಲ್ಲ, ಕಿರುತೆರೆ ನಟಿ ಕೂಡ. ರವೀಂದರ್ ಕೂಡ ಕಿರುತೆರೆಯ ಲೋಕದಲ್ಲಿ ಅನೇಕ ಧಾರಾವಾಹಿಗಳನ್ನು ನಿರ್ಮಾಣ ಮಾಡಿದ್ದಾರೆ. ರವೀಂದರ್ ನಿರ್ಮಾಣ ಮಾಡಿದ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸಿದ್ದಾರೆ. ಮೊದಲ ಪ್ರೇಮ ಶುರುವಾಗಿದ್ದೇ ಈ ಧಾರಾವಾಹಿಯ ಮೂಲಕ. ಮೊದಲು ನಟಿಯಾಗಿ ಪರಿಚಯ. ಆಮೇಲೆ ಸ್ನೇಹ. ಸ್ನೇಹ ವಿಶ್ವಾಸವಾಗಿ, ಅದು ಸಂದೇಶವಾಗಿ ಹರಿದು ಬಂದು ಇಬ್ಬರನ್ನೂ ಒಂದಾಗಿಸಿದೆ.

 

ಅದೊಂದು ರಾತ್ರಿ ಮಹಾಲಕ್ಷ್ಮಿ ಮೊಬೈಲ್ ಗೆ ಬಂದ ಸಂದೇಶ ಸ್ವತಃ ಅವರನ್ನೇ ಅಚ್ಚರಿಗೆ ನೂಕಿದೆ. ಆ ಕಡೆಯಿಂದ ಸಂದೇಶ ಕಳುಹಿಸಿದ್ದು ರವೀಂದರ್. ನೀವು ನನಗೆ ಇಷ್ಟವಾಗಿದ್ದೀರಿ. ಮದುವೆ ಯಾಕೆ ಆಗಬಾರದು ಎನ್ನುವ ರವೀಂದರ್ ಕೋರಿಕೆಯನ್ನು ಕೆಲವು ದಿನಗಳ ನಂತರ ಮಹಾಲಕ್ಷ್ಮಿ ಒಪ್ಪಿಕೊಂಡಿದ್ದಾರೆ. ಅಲ್ಲಿಂದ ಶುರುವಾದ ಪ್ರೇಮಕಾವ್ಯ ಮದುವೆಯಲ್ಲಿ ಅಂತ್ಯಗೊಂಡಿದೆ.

Share This Article