ತವರೂರಿಗೆ ಬಂದಿಳಿದ ‘ಮಿಸ್ ಇಂಡಿಯಾ ವರ್ಲ್ಡ್’ ಸಿನಿ ಶೆಟ್ಟಿ: ತುಳುವಿನಲ್ಲಿ ಧನ್ಯವಾದ ಹೇಳಿದ ಸುಂದರಿ

ಮಂಗಳೂರು ಮೂಲದ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟ ಮುಡಿಗೇರಿಸಿಕೊಂಡಿರುವ ಸಿನಿ ಶೆಟ್ಟಿ ಇಂದು ಮಂಗಳೂರಿಗೆ ಆಗಮಿಸಿದ್ದರು. ತವರು ನೆಲಕ್ಕೆ ಸಿನಿ ಶೆಟ್ಟಿ ಕಾಲಿಡುತ್ತಿದ್ದಂತೆಯೇ ಅದ್ಧೂರಿ ಸ್ವಾಗತ ದೊರೆಯಿತು. ಮಂಗಳೂರು ಜನತೆ ಪ್ರೀತಿಯಿಂದಲೇ ಸಿನಿ ಶೆಟ್ಟಿ ಅವರನ್ನು ಬರಮಾಡಿಕೊಂಡು ತನ್ನೂರಿನ ಹುಡುಗಿಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.
ಸಿನಿ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಇನ್ನಂಜೆ ಅವರು. ಮಿಸ್ ಇಂಡಿಯಾ ಆದ ಬಳಿಕ ಇದೇ ಮೊದಲ ಬಾರಿಗೆ ಅವರು ಮಂಗಳೂರಿಗೆ ಆಗಮಿಸಿದ್ದರು. ಮಂಗಳೂರಿನ ಜನತೆ ಮನೆ ಮಗಳಿಗೆ ಆರತಿ ಎತ್ತಿ, ಹೂ ಮಾಲೆ ಹಾಕಿ ಸಡಗರದಿಂದಲೇ ಬರಮಾಡಿಕೊಂಡರು. ಕಿರೀಟ ಸಮೇತ ಸಿನಿ ಶೆಟ್ಟಿ ಮಂಗಳೂರಿಗೆ ಆಗಮಿಸಿದ್ದು ವಿಶೇಷವಾಗಿತ್ತು. ಮಿಸ್ ಇಂಡಿಯಾ ವರ್ಲ್ದ್ ಕಿರೀಟ ಕಂಡು ಹಲವರು ಸಂಭ್ರಮಿಸಿದರು. ಇದನ್ನೂ ಓದಿ:ಪೊನ್ನಿಯನ್ ಸೆಲ್ವನ್ ವಿವಾದ : ಮಣಿರತ್ನಂ ಮತ್ತು ವಿಕ್ರಮ್ ಗೆ ನೋಟಿಸ್
ನಂತರ ಮಾಧ್ಯಮಗಳ ಜೊತೆ ಮಾತನಾಡಿರದ ಸಿನಿ ಶೆಟ್ಟಿ ತುಳುವಿನಲ್ಲೇ ಕನ್ನಡಿಗರಿಗೆ ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಒಳ್ಳೆಯ ಪಾತ್ರಗಳು ಮತ್ತು ಕಥೆಗಳು ಸಿಕ್ಕರೆ ಸಿನಿಮಾದಲ್ಲಿ ನಟಿಸುವುದಾಗಿತೂ ಅವರು ತಿಳಿಸಿದರು. ಆನಂತರ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.