ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಮಸೀದಿ (Mosque) ಬಗ್ಗೆ ಅಪಪ್ರಚಾರ ಮಾಡಿರೋ ಆರೋಪದಲ್ಲಿ ಮುಸ್ಲಿಂ ಮುಖಂಡನ ವಿರುದ್ಧವೇ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ (Bellare) ಮಸೀದಿ ಆಡಳಿತ ಪೊಲೀಸ್‌ಗೆ ದೂರು ನೀಡಿದೆ.
ಬೆಳ್ಳಾರೆಯ ಇಬ್ರಾಹಿಂ ಖಲೀಲ್ ಎಂಬಾತ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಬೆಳ್ಳಾರೆ ಮಸೀದಿಯಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ ಎಂದು ಪೋಸ್ಟ್ ಮಾಡಿದ್ದ. ಸುಳ್ಳು ದ್ವೇಷದ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಖಲೀಲ್ ಬರೆಯುತ್ತಿದ್ದಾನೆ. ಪಂಗಡ ಮತ್ತೆ ಜಾತಿಗಳ ನಡುವೆ ವೈಷಮ್ಯ, ವೈರಾಗ್ಯ, ಕೋಮು ಪ್ರಚೋದನೆ ಬರುವ ರೀತಿಯಲ್ಲಿ ಬರೆದಿದ್ದಾನೆ ಎಂದು ಜಮಾಅತ್ ಅಧ್ಯಕ್ಷ ಯುಹೆಚ್ ಅಬೂಬಕ್ಕರ್ ಹಾಜಿ ದೂರು ನೀಡಿದ್ದಾರೆ. ಇದನ್ನೂ ಓದಿ: 1 ಲಕ್ಷ ಕೋಟಿ ಲಾಸ್‌ನಲ್ಲಿರುವ 33 ಕಂಪನಿಗಳು ಚುನಾವಣಾ ಬಾಂಡ್‌ಗೆ 570 ಕೋಟಿ ಹಣ ನೀಡಿವೆ – ಪ್ರಿಯಾಂಕ್ ಖರ್ಗೆ
Advertisement
Advertisement
ಪ್ರವೀಣ್ ನೆಟ್ಟಾರು ಹತ್ಯೆಯನ್ನೂ ಉಲ್ಲೇಖಿಸಿ ಬೆಳ್ಳಾರೆ ಮಸೀದಿಗೆ ತಳುಕು ಹಾಕಿ ಖಲೀಲ್ ಪೋಸ್ಟ್ ಮಾಡಿದ್ದಾನೆ. ಹೀಗಾಗಿ ಮಸೀದಿ ಆಡಳಿತ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಈ ಮಧ್ಯೆ ಇಬ್ರಾಹಿಂ ಖಲೀಲ್ ಪ್ರತಿದೂರು ನೀಡಿದ್ದು, ತನಗೆ ಜೀವ ಬೆದರಿಕೆ ಇದೆ. ಬೆಳ್ಳಾರೆಯ ಜಮಾಲ್ ಮತ್ತು ಅಝರುದ್ದೀನ್ ಎಂಬವರಿಂದ ಜೀವ ಬೆದರಿಕೆ ಇದೆ. 2018ರಿಂದ ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ನನಗೆ ಪರಿಚಯವಿಲ್ಲದ ನಂಬರ್‌ನಿಂದ ಕಾಲ್‌ಗಳು ಬರುತ್ತಿದೆ. ಸೆ.27ರಂದು ನಾನು ಬೆಳ್ಳಾರೆಗೆ ಹೋಗಿದ್ದಾಗ ನನ್ನ ಬೈಕನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ. ಇವರಿಬ್ಬರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾನೆ. ಇದನ್ನೂ ಓದಿ: 136 ಶಾಸಕರಿಗೆ 1 ರೂಪಾಯಿ ಅನುದಾನ ಕೊಟ್ಟಿಲ್ಲ, ಇನ್ನೂ ಚನ್ನಪಟ್ಟಣಕ್ಕೆ 500 ಕೋಟಿ ಎಲ್ಲಿಂದ ಬರುತ್ತೆ?- ನಿಖಿಲ್
Advertisement