ಬೆಂಗಳೂರು: ಹೊಸ ವರ್ಷಕ್ಕೆ ಶುಭಾಶಯ ಹೇಳದಕ್ಕೆ ಗರ್ಭಿಣಿ ಪತ್ನಿ ಎದುರೇ ಪತಿಗೆ ಚಾಕು ಇರಿದ ಘಟನೆ ತಡರಾತ್ರಿ 12 ಗಂಟೆಗೆ ಬೆಂಗಳೂರಿನ ಕುರುಬರಹಳ್ಳಿಯ ಕಮಲಾನಗರದ ಶೆಟ್ಟಿ ಗಣಪತಿ ವಾರ್ಡ್ ನಲ್ಲಿ ನಡೆದಿದೆ.
ಪ್ರವೀಣ್ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿ. ಮಧ್ಯರಾತ್ರಿ ಕಿಡಿಗೇಡಿಗಳು ಕುಡಿದು ಬೈಕಿನಲ್ಲಿ ಚಾಕು ಹಿಡಿದುಕೊಂಡು ತೂರಾಡಿಕೊಂಡು ಬಂದಿದ್ದಾರೆ. ಈ ವೇಳೆ ಅಡ್ಡ ಬಂದಿದ್ದ ಪ್ರವೀಣ್‍ಗೆ ನ್ಯೂ ಇಯರ್ ವಿಶ್ ಮಾಡಿದ್ದಾರೆ. ಬಳಿಕ ನಮಗೆ ವಿಶ್ ಮಾಡು ಎಂದು ಅವಾಜ್ ಹಾಕಿದ್ದಾರೆ.
ಚಾಕು ಕಂಡು ಗಾಬರಿಯಾದ ಪ್ರವೀಣ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ದುಷ್ಕರ್ಮಿಗಳು ನಮಗೆ ವಿಶ್ ಮಾಡುವುದಿಲ್ಲವಾ ನೀನು ಎಂದು ಅಡ್ಡಹಾಕಿ ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಪ್ರವೀಣ್‍ಗೆ ಚಾಕುವಿನಿಂದ ಇರಿಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗಾಯಗೊಂಡ ಪ್ರವೀಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv