ಬೀದರ್: ಹಳೆಯ ದ್ವೇಷದ ಹಿನ್ನೆಲೆ ಕಿಡಿಗೇಡಿಗಳು ರೈತರೊಬ್ಬರ ಮೂರು ಹಸುಗಳಿಗೆ ವಿಷ ಹಾಕಿ ಅಮಾನವೀಯತೆ ಮೆರೆದ ಘಟನೆ ಬೀದರ್ ನಲ್ಲಿ ನಡೆದಿದೆ.
ವಿಷ ತಿಂದ ಹಸುಗಳು ಜಿಲ್ಲೆಯ ಔರಾದ್ ಪಟ್ಟಣದ ಗೋವಿಂದ ರೆಡ್ಡಿಗೆ ಸೇರಿದ್ದಾಗಿವೆ. ಯಾರೋ ಕಿಡಿಗೇಡಿಗಳು ಗೋವಿಂದ ಅವರ ಮೂರು ಹಸುಗಳಿಗೆ ವಿಷ ಹಾಕಿದ್ದಾರೆ. ವಿಷ ಹಾಕಿದ ಪರಿಣಾಮ ಮೂಕ ಪ್ರಾಣಿಗಳು ನರಳಿ ನರಳಿ ಕೊನೆಯುಸಿರೆಳೆದಿವೆ.
Advertisement
Advertisement
ಬಸ್ ಸ್ಟ್ಯಾಂಡ್ ಹಿಂದಿನ ರಸ್ತೆ ಪಕ್ಕದಲ್ಲಿ ಹಸುಗಳಿಗೆ ಮೇವು ಹಾಕಲಾಗಿತ್ತು. ಆದರೆ ತಡರಾತ್ರಿ ಅಪರಿಚಿತರು ಮೇವಿನಲ್ಲಿ ಕ್ರಿಮಿನಾಶಕ ವಿಷ ಬೆರೆಸಿ ಹಸುಗಳ ಸಾವಿಗೆ ಕಾರಣರಾಗಿದ್ದಾರೆ. ತೀವ್ರ ಅಸ್ವಸ್ಥರಾದ ಹಸುಗಳಿಗೆ ಸ್ಥಳೀಯ ಪಶು ವೈದ್ಯರು ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಹಸುಗಳು ಮತಪಟ್ಟಿದೆ.
Advertisement
ಸದ್ಯ ಘಟನೆ ನಂತರ ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಲಕ್ಷಾಂತರ ಮೌಲ್ಯದ ಸಾಕು ಹಸುಗಳನ್ನು ಕಳೆದುಕೊಂಡು ಕಂಗಾಲಾದ ಗೋವಿಂದ ರೆಡ್ಡಿ ಅವರು ಔರಾದ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews