ಚಿಕ್ಕಮಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಧರ್ಮ ಜಾಗರಣದ ಜಿಲ್ಲಾ ಸಹ ಸಂಯೋಜಕರ ಕಾರಿನ (Car) ಮೇಲೆ ಕಿಲ್ ಯು ಜಿಹಾದಿ ಬರಹ ಬರೆದಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರಿನ ಲಕ್ಷ್ಮೀಶ ನಗರದ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರದ ಗಾಳಿ ತೆಗೆದ ದುಷ್ಕರ್ಮಿಗಳು ಬಳಿಕ ಈ ರೀತಿ ಬರೆದಿದ್ದಾರೆ. ಕಿಲ್ ಯು, ಜಿಹಾದ್, ಅಶ್ಲೀಲ ಪದಗಳ ಬಳಕೆ ಮಾಡಲಾಗಿದೆ. ಇದನ್ನೂ ಓದಿ: ಹೊಟ್ಟೆ ಕ್ಯಾನ್ಸರ್ ರೋಗದಿಂದ ಮನನೊಂದು ವ್ಯಕ್ತಿ ಆತ್ಮಹತ್ಯೆಗೆ ಶರಣು
ಈ ಕುರಿತು ಆರ್‍ಎಸ್‍ಎಸ್ ಧರ್ಮಜಾಗರಣ ಸಹ ಸಂಯೋಜಕ ಡಾ.ಶಶಿಧರ್ ಅವರು ಕಡೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.