ಕಂಠಪೂರ್ತಿ ಕುಡಿದು ಬೈಕ್‌ಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

Public TV
1 Min Read
bengaluru bike fire

ಬೆಂಗಳೂರು: ಕಂಠಪೂರ್ತಿ ಕುಡಿದು ನಶೆಯಲ್ಲಿ ಕಿಡಿಗೇಡಿಗಳು ಬೈಕ್‌ಗಳಿಗೆ (Bike) ಬೆಂಕಿ (Fire) ಹಚ್ಚಿರುವ ಘಟನೆ ವಸಂತನಗರದ ಮಾರಿಯಮ್ಮ ಸ್ಟ್ರೀಟ್‌ನಲ್ಲಿ ನಡೆದಿದೆ.

ಕಿಡಿಗೇಡಿಗಳು ಬೆಳಗ್ಗಿನ ಜಾವ 5 ಗಂಟೆ ವೇಳೆಗೆ ದುಷ್ಕೃತ್ಯ ಎಸಗಿದ್ದಾರೆ. ಇದರಿಂದ 5 ಬೈಕ್‌ಗಳು ಸುಟ್ಟು ಕರಕಲಾಗಿವೆ. ದುಷ್ಕರ್ಮಿಗಳು ಗಾಂಜಾ ಸೇವಿಸಿ ಕೃತ್ಯ ಎಸಗಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.

bengaluru bike fire 1

ಘಟನೆಯಲ್ಲಿ ಆಕ್ಟೀವಾ, ಆರ್15, ಆಕ್ಸಸ್, ಬಜಾಜ್ ಡಾಮನೋರ್, ಎಂಟರ್ ಬೈಕ್‌ಗಳು ಸಂಪೂರ್ಣ ಸುಟ್ಟು ಹೋಗಿವೆ. ಬೈಕ್‌ಗಳ ಪಕ್ಕ ನಿಲ್ಲಿಸಿದ್ದ ಕಾರ್‌ಗೂ ಬೆಂಕಿಯ ಕಿಡಿ ತಾಗಿದ್ದು, ಸದ್ಯ ದೊಡ್ಡ ಮಟ್ಟದ ಹಾನಿಯಾಗಿಲ್ಲ. ಇದನ್ನೂ ಓದಿ: ಆಟವಾಡುತ್ತ ಇಂಗುಗುಂಡಿಗೆ ಬಿದ್ದು 8ರ ಬಾಲಕ ದಾರುಣ ಸಾವು

ಕಿಡಿಗೇಡಿಗಳು ಕೃತ್ಯ ಎಸಗುವುದಕ್ಕೂ ಮುನ್ನ ರಸ್ತೆಯಲ್ಲಿ ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಯುವಕರ ಪತ್ತೆಗೆ ಪೊಲೀಸರು ಸ್ಥಳೀಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕದ್ದ ಬೈಕನ್ನು ಮನೆ ಮುಂದೆ ಬಿಟ್ಟು ಕಾರನ್ನು ಎಗರಿಸಿದ ಕಳ್ಳರು

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article