ತುಮಕೂರು: ಕುಚ್ಚಂಗಿ ಗವಿರಂಗನಾಥಸ್ವಾಮಿ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಪೂಜೆ ಸಲ್ಲಿಸಲು ಅರ್ಚಕ ದೇವರಾಜು ತೆರಳಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 350 ವರ್ಷದ ಇತಿಹಾಸ ಇರುವ ಈ ಐತಿಹಾಸಿಕ ವಿಗ್ರಹದ ಕೈಗಳನ್ನು ಮುರಿದು ವಿರೂಪಗೊಳಿಸಿದ್ದಾರೆ.
Advertisement
ಈ ಘಟನೆಗೆ ಸಂಬಂಧಿಸಿದಂತೆ ಕೋರಾ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಶನಿವಾರದಿಂದ ಆರಾಧನಾ ಮಹೋತ್ಸವ ನಡೆಕಬೇಕಿದ್ದು, ವಿಗ್ರಹ ಭಿನ್ನಗೊಂಡ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದೆ.