ಹುಬ್ಬಳ್ಳಿ: ಒಂದೇ ಒಂದು ಪೋಸ್ಟ್ ನಿಂದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಗಲಾಟೆ ಆರಂಭವಾಗಿದ್ದು, ಇದೀಗ ಹಿಂಸಾತ್ಮಕ ರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
Advertisement
ಮೆಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿದ ಪೋಸ್ಟ್ ನಿಂದ ಶುರುವಾದ ಗಲಾಟೆಯ ಪರಿಣಾಮ ಹುಬ್ಬಳ್ಳಿ ನಗರ ರಾತ್ರೋರಾತ್ರಿ ಹೊತ್ತಿ ಉರಿದಿದೆ. ಹುಬ್ಬಳ್ಳಿಯಲ್ಲಿ ಪುಂಡರ ಗುಂಪು ದೇವಸ್ಥಾನ, ಆಸ್ಪತ್ರೆ, ಬಸ್, ಪೊಲೀಸರ ವಾಹನಗಳ ಮೇಲೆ ಕಲ್ಲೆಸೆದಿದೆ. ಪೊಲೀಸ್ ವಾಹನಗಳನ್ನೇ ಟಾರ್ಗೆಟ್ ಮಾಡಿ ದಾಂಧಲೆ ನಡೆಸಿದೆ.
Advertisement
Advertisement
ದುಷ್ಕರ್ಮಿಗಳು ಪೊಲೀಸ್ ವಾಹನಗಳನ್ನೇ ಟಾರ್ಗೆಟ್ ಮಾಡಿ ಹಾನಿಗೆಡವಿದ್ದಾರೆ. ಪೊಲೀಸ್ ಜೀಪ್‍ಗಳಿಗೆ ಕಲ್ಲುತೂರಾಟ ಮಾಡಿದ ಪರಿಣಾಮ ಗ್ಲಾಸ್ ಪುಡಿಪುಡಿಯಾಗಿದೆ. ಅಲ್ಲದೆ ಪೊಲೀಸ್ ವಾಹನಗಳನ್ನು ಪಲ್ಟಿ ಮಾಡಿದ ದುಷ್ಕೃತ್ಯ ಮೆರೆಯಲಾಗಿದೆ. ರಾತ್ರಿ ನಡೆದ ಘಟನೆಯಿಂದ 5 ಮಂದಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ
Advertisement
ಗಲಭೆಕೋರರು ದೇವಸ್ಥಾನದ ಮೇಲೂ ಕಲ್ಲು ತೂರಿದ ಪರಿಣಾಮ ದಿಡ್ಡಿ ಹನುಮಂತ ದೇವಸ್ಥಾನದ ಕಿಟಕಿ ಗ್ಲಾಸ್ ಪುಡಿಪುಡಿಯಾಗಿದೆ. ಹನುಮ ಜಯಂತಿ ಹಿನ್ನೆಲೆ ದೇಗುಲ ಅಲಂಕೃತಗೊಂಡಿತ್ತು. ಪುಂಡರು ನಡೆಸಿದ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ನಿವಾಸಿಗಳು, ಪೊಲೀಸರು ಬರೋದು ಹತ್ತು ನಿಮಿಷ ತಡವಾಗಿದ್ದರೆ ಪುಂಡರು ಮನೆ ನುಗ್ಗುತ್ತಿದ್ದರು. ಏಕಾಏಕಿ ಮನೆಗಳ ಮುಂದೆ ಬಂದು ಅಲ್ಲಾಹೋ ಅಕ್ಬರ್ ಅಂತ ಘೋಷಣೆ ಕೂಗಲು ಶುರು ಮಾಡಿದರು. ಕಾರ್ ಗ್ಲಾಸ್ ಹೊಡೆದು ಅಂಗಡಿ ಮುಂಗಟ್ಟಿಗೆ ಕಲ್ಲು ಹೊಡೆದರು ಎಂದು ಪಬ್ಲಿಕ್ ಟಿವಿ ತಿಳಿಸಿದರು.