ಉತ್ತರ ಭಾರತದ ಬಳಿಕ ರಾಜ್ಯದಲ್ಲಿ ಪದ್ಮಾವತ್‍ಗೆ ವಿರೋಧ – ಬೆಳಗಾವಿ ಚಿತ್ರಮಂದಿರಕ್ಕೆ ಬೆಂಕಿ ಹಾಕಲು ಯತ್ನ

Public TV
1 Min Read
BLG PADMAVAT COLLAGE

ಬೆಳಗಾವಿ: ಉತ್ತರ ಭಾರತದ ಬಳಿಕ ಇದೀಗ ರಾಜ್ಯದಲ್ಲಿಯೂ ನಟಿ ದೀಪಿಕಾ ಪಡುಕೋಣೆ ಅಭಿನಯದ `ಪದ್ಮಾವತ್’ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ.

ಗುರುವಾರ ರಾತ್ರಿ 9.25ರ ಸುಮಾರಿಗೆ ಶೋ ಮುಗಿಸಿ ವಾಪಸ್ ಆಗುವಾಗ ದುಷ್ಕರ್ಮಿಗಳು ಸೀಮೆಎಣ್ಣೆ ತುಂಬಿದ ಬಾಟಲ್‍ನನ್ನು ಪ್ರೇಕ್ಷಕರ ಕಡೆ ಎಸೆದು ಪರಾರಿಯಾಗಿದ್ದಾರೆ. ಬೆಳಗಾವಿಯ ಪ್ರಕಾಶ ಚಿತ್ರಮಂದಿರದ ಮುಂಭಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.

BLG PADMAVAT 3

ಪ್ರೇಕ್ಷಕರು ಹೊರಬರುತ್ತಿದ್ದ ವೇಳೆ ದುಷ್ಕೃತ್ಯ ಎಸಗಿದ್ದು, ಭಯದಿಂದ ಪ್ರೇಕ್ಷಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಆದರೆ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಭಾರೀ ಅನಾಹುತ ತಪ್ಪಿಸಿದ್ದಾರೆ. ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಖಡೇಬಜಾರ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪದ್ಮಾವತಿ ಚಿತ್ರ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿ ಪದ್ಮಾವತ್ ಆಗಿ ಬದಲಾಗಿದ್ದು, ಯು/ಎ ಸರ್ಟಿಫಿಕೆಟ್ ದೊರೆತಿತ್ತು. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತ್ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಚಿತ್ರದಲ್ಲಿ ಇಬ್ಬರು ನಾಯಕರಿದ್ದು, ಶಾಹಿದ್ ಕಪೂರ್ ರಾಣಾ ರತನ್ ಸಿಂಗ್ ಆಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಟ ರಣ್‍ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿ ಆಗಿ ಬಣ್ಣ ಹಚ್ಚಿದ್ದಾರೆ.

BLG PADMAVAT 2

BLG PADMAVAT 1

BLG PADMAVAT 6

BLG PADMAVAT 5

BLG PADMAVAT 4

Share This Article