Bengaluru RuralDistrictsKarnatakaLatest

ಬೃಹತ್ ಆಕಾರದಲ್ಲಿ ಬೆಳೆದ ಮರಕ್ಕೆ ಬೆಂಕಿ ಹಚ್ಚಿದ ಕಿಡಿಗೇಡಿಗಳು

ಬೆಂಗಳೂರು: ಬೃಹತ್ ಆಕಾರವಾಗಿ ಬೆಳೆದು ಒಣಗಿರುವ ಮರಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವಂತ ಘಟನೆ ನಡೆದಿದೆ.

ಬೆಂಗಳೂರು ಹೊರವಲಯ ನೆಲಮಂಗಲದ ರೇಣುಕಾ ನಗರದಲ್ಲಿನ ರಸ್ತೆ ಬದಿಯಲ್ಲಿದ್ದ ಹಲವು ವರ್ಷಗಳ ಮರದ ಬುಡಕ್ಕೆ ಕೆಲ ಕಿಡಿಗೇಡಿಗಳು ಶುಕ್ರವಾರ ರಾತ್ರಿ ಬೆಂಕಿ ಇಟ್ಟಿದ್ದಾರೆ. ಹೀಗಾಗಿ ರಾತ್ರಿಯಿಡಿ ಹೊತ್ತಿ ಉರಿದಿರುವ ಮರ ಸಂಪೂರ್ಣ ಕರಕಲಾಗಿದೆ.

ಯಾವ ಕ್ಷಣದಲ್ಲಾದರೂ ಹೆದ್ದಾರಿಗೆ ಬೀಳುವ ಸ್ಥಿತಿ ಇದ್ದು, ಮರ ವಾಹನ ಸಮಾರರ ಮೇಲೆ ಬಿದ್ದರೆ ಭಾರೀ ಅನಾಹುತ ಆಗುವ ಸಾಧ್ಯತೆ ಇದೆ. ಹಾಗಾಗಿ ರಸ್ತೆಯಲ್ಲಿ ಓಡಾಡಲು ಸ್ಥಳೀಯರು ಜನರು ಹಿಂದೇಟು ಹಾಕುತ್ತಿದ್ದಾರೆ.

ನೆಲಮಂಗಲ ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯಲ್ಲಿ ಈ ಮರ ಇದೆ. ಕಂಡು ಕಾಣದಂತಿರುವ ಅಧಿಕಾರಿಗಳ ವಿರುದ್ಧ ಸ್ಥಳೀಯ ಜನರ ಆಕ್ರೋಶ ವ್ಯಕ್ತವಾಗಿದೆ. ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

Back to top button