ಬೆಂಗಳೂರು: ಎಂಇಪಿ ಪಕ್ಷದ ಅಭ್ಯರ್ಥಿ ಜಯಲಕ್ಷ್ಮೀ ಅವರಿಗೆ ಪೋಲಿ ಹುಡುಗರ ಕಾಟ ನೀಡುತ್ತಿದ್ದು, ಪ್ರಚಾರಕ್ಕೆ ಹೋದ್ರೆ ಜನರ ಗುಂಪು ಹಿಂಬಾಲಿಸಿ ಇಲ್ಲ ಸಲ್ಲದ ಕಾಟ ಕೊಡುತ್ತಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.
ಜನ ಹಿಂದೆ ಬರೋದು ನೋಡಿದ್ರೆ ಭಯ ಆಗುತ್ತೆ. ಕೊಲೆ ಮಾಡೋ ಭಯ. ಇನ್ನು ಕಾರಿನಿಂದ ಏಕಾಏಕಿ ಇಳಿದು ಕೈ-ಕೈ ಕಟ್ಟಿಕೊಂಡು ನನ್ನ ನೋಡೋದು, ಹಿಂಬಾಲಿಸಿಕೊಂಡು ಬರುತ್ತಾರೆ. ಅಲ್ಲದೇ ಹಿಂದೆ ಬಿದ್ದು ಚೇಡಿಸ್ತಾರೆ ಎಂದು ಜಯಲಕ್ಷ್ಮಿ ಆಗ್ನೇಯ ವಿಭಾಗ ಡಿಸಿಪಿ ಬೋರಲಿಂಗಯ್ಯ ಅವರಿಗೆ ದೂರು ನೀಡಿದ್ದಾರೆ.
Advertisement
Advertisement
ನಾನು ಈ ಬಾರಿ ಬಿಟಿಎಂ ಲೇಔಟ್‍ನಲ್ಲಿ ಎಂಇಪಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಿನಿ. ನಾನು ಇಲ್ಲಿ ಪ್ರಚಾರಕ್ಕೆ ಬಂದ ದಿನದಿಂದ ಬೈಕಿನಲ್ಲಿ ಹಾಗೂ ಕಾರಿನಲ್ಲಿ ಒಂದೊಂದು ಗುಂಪು ಹಿಂಬಾಲಿಸಿ ಬರುತ್ತಿದ್ದಾರೆ. ನನ್ನದೇ ಆದ ಒಬ್ಬ ಫೋಟೋಗ್ರಾಫರ್ ಹಾಗೂ ವಿಡಿಯೋಗ್ರಾಫರ್ ಇದ್ದಾರೆ. ಅದನ್ನು ನಾನು ರೆಕಾರ್ಡ್ ಮಾಡಿಸಿ ಡಿಸಿಪಿಗೆ ನೀಡಿದ್ದೇನೆ. ಇದು ನನಗೆ ಗೊತ್ತಿಲ್ಲದ ಜಾಗ ನಾನು ಮಹಿಳೆಯಾಗಿದ್ದು, ನನಗೆ ರಕ್ಷಣೆ ಬೇಕಿದೆ. ರಾಮಲಿಂಗ ರೆಡ್ಡಿ ಅವರಿಗೆ ಗೊತ್ತಿರುವ ಒಬ್ಬ ವ್ಯಕ್ತಿಯಿಂದ ನಾನು ನಾಮಪತ್ರ ವಾಪಸ್ ಪಡೆಯಲು ಹೇಳಿದ್ದರು. ಆದರೆ ನಾನು ಅದ್ದಕ್ಕೆ ಒಪ್ಪಲಿಲ್ಲ. ಹಾಗಾಗಿ ಈ ಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ ಎಂದು ಜಯಲಕ್ಷ್ಮೀ ಆರೋಪಿಸಿದ್ದಾರೆ.
Advertisement
ಈ ಸಂಬಂಧ ಡಿಸಿಪಿ ಬೋರಲಿಂಗಯ್ಯ ಅವರಿಗೆ ದೂರು ನೀಡಲಾಗಿದ್ದು, ಪ್ರಚಾರಕ್ಕೆ ಹೋಗುವ ವೇಳೆ ರಕ್ಷಣೆ ನೀಡೋದಾಗಿ ಹೇಳಿದ್ದಾರೆ ಎಂದು ಜಯಲಕ್ಷ್ಮೀ ತಿಳಿಸಿದ್ದಾರೆ.