ಗದಗ: ಹೋಳಿ ಹಬ್ಬದ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಗೆ ಮೊಟ್ಟೆ, ಸಗಣಿ, ಮರಳು, ರಾಸಾಯನಿಕ ಗೊಬ್ಬರ, ಪಿನಾಯಿಲ್, ಮದ್ಯಪಾನ, ಕಲುಷಿತ ಬಣ್ಣ, ಗಾಜಿನ ಪುಡಿ ಮಿಶ್ರಿತ ಬಣ್ಣ ಎಲ್ಲವನ್ನೂ ಮಿಶ್ರಣ ಮಾಡಿ ಎರಚಿದ ಪರಿಣಾಮ ದುರ್ವಾಸನೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥವಾದ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ (Laxmeshwara) ತಾಲೂಕಿನ ಸುವರ್ಣಗಿರಿ ತಾಂಡದಲ್ಲಿ ನಡೆದಿದೆ.
8 ವಿದ್ಯಾರ್ಥಿನಿಯರು ಶಾಲೆಗೆ ಹೋರಟಿದ್ದರು. ಇದಕ್ಕಾಗಿಯೇ ಕಾದು ಕುಳಿತಿದ್ದ ಪೋಲಿ ಯುವಕರ ಗುಂಪು ವಿದ್ಯಾರ್ಥಿನಿಗಳು ಬಸ್ ಹತ್ತುವ ಸಂದರ್ಭದಲ್ಲಿ ಏಕಾಏಕಿ ಬಣ್ಣ ಎರಚಿತು. ಇದರ ದುರ್ವಾಸನೆಗೆ ಉಸಿರಾಟದ ತೊಂದರೆಯಿಂದ ವಿದ್ಯಾರ್ಥಿನಿಯರು ಅಸ್ವಸ್ಥರಾಗಿದ್ದರು. ಉಸಿರಾಟದ ತೊಂದರೆ, ಎದೆನೋವು, ಕಣ್ಣು ಉರಿ, ತಲೆನೋವು ಎಂದು ವಿದ್ಯಾರ್ಥಿನಿಯರು ಕಣ್ಣೀರಿಟ್ಟಿದ್ದರು. ಇದನ್ನೂ ಓದಿ: ಯುಪಿಯ ಪುರುಷನಿಗೆ ಪಾಕ್ ಏಜೆಂಟ್ ನೇಹಾ ಆಮಿಷ – ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಮಾಡ್ತಿದ್ದವನ ಬಂಧನ
ಕೂಡಲೇ ವಿದ್ಯಾರ್ಥಿಗಳನ್ನು ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ವಿದ್ಯಾರ್ಥಿನಿಯರು ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರಿಂದ ಅವರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದನ್ನೂ ಓದಿ: ಬಸ್ ಹರಿದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು
ಆಸ್ಪತ್ರೆಗೆ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದರು. ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿನಿಯರ ಪೋಷಕರು ಒತ್ತಾಯಿಸಿದರು. ಘಟನೆಯ ಕುರಿತು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.