ಹೈದರಾಬಾದ್: ಕ್ಸಿಯೋಮಿ ಕಂಪನಿಯ ಮೊಬೈಲ್ ಗಳನ್ನು ಸಾಗಿಸುತ್ತಿದ್ದ ಟ್ರಕ್ ತಡೆದ ದರೋಡೆಕೋರರು ಚಾಲಕನನ್ನು ಥಳಿಸಿ ಸುಮಾರು ಒಂದು ಕೋಟಿ ರೂ. ಮೌಲ್ಯದ ಫೋನ್‍ಗಳನ್ನು ದರೋಡೆ ಮಾಡಿದ್ದಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಈ ದರೋಡೆ ನಡೆದಿದೆ.
ಟ್ರಕ್ ಮೊಬೈಲ್‍ಗಳೊಂದಿಗೆ ನೆಲ್ಲೂರುನಿಂದ ಕೋಲ್ಕತ್ತಾದತ್ತ ತೆರಳುತಿತ್ತು. ಮಾರ್ಗ ಮಧ್ಯೆ ಚಾಲಕ ವಿಶ್ರಾಂತಿಗಾಗಿ ಹೆದ್ದಾರಿ ಬಳಿ ಟ್ರಕ್ ನಿಲ್ಲಿಸಿದ್ದರು. ಈ ವೇಳೆ ನಾಲ್ವರು ದರೋಡೆಕೋರರು ಚಾಲಕನನ್ನು ಮರಕ್ಕೆ ಕಟ್ಟಿಹಾಕಿದ್ದಾರೆ. ಘಟನೆ ನೆಲ್ಲೂರು ಜಿಲ್ಲೆಯ ದಗಾದರ್ಥಿ ಗ್ರಾಮದ ಬಳಿಯ ಹೆದ್ದಾರಿ ಬಳಿ ನಡೆದಿದ್ದು, ಟ್ರಕ್ ನಲ್ಲಿದ್ದ ಎಲ್ಲ ಮೊಬೈಲ್ ಗಳನ್ನು ತಮ್ಮ ವಾಹನಕ್ಕೆ ತುಂಬಿಸಿಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ.
Advertisement
Advertisement
ಬೆಳಗ್ಗೆ ಗ್ರಾಮಸ್ಥರು ಮರಕ್ಕೆ ಕಟ್ಟಿಹಾಕಿದ್ದ ಚಾಲಕನನ್ನು ಬಿಡಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಚಾಲಕ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟ್ರಕ್ ನಲ್ಲಿ ಸುಮಾರು 1 ಕೋಟಿ ಬೆಲೆ ಬಾಳುವ ಕ್ಸಿಯೋಮಿ ಕಂಪನಿಯ ಮೊಬೈಲ್ ಗಳಿದ್ದವು. ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ ದರೋಡೆಕೋರರ ಸುಳಿವು ಸಿಕ್ಕಿದೆ. ದರೋಡೆಕೋರರು ಪೂರ್ವಯೋಜಿತವಾಗಿ ದರೋಡೆ ಕೈ ಹಾಕಿದ್ದರು ಎನ್ನುವ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ದರೋಡೆಯಲ್ಲಿ ಕಂಪನಿಯ ಕೆಲ ಸದಸ್ಯರ ಕೈವಾಡ ಇರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಟ್ರಕ್ ನಲ್ಲಿ 6ರಿಂದ 14 ಸಾವಿರ ಬೆಲೆಯ ಮೊಬೈಲ್ ಗಳಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv