ಮಂಡ್ಯ: ಜೀವನೋಪಾಯಕ್ಕಾಗಿ ಇಟ್ಟುಕೊಂಡಿದ್ದ ಗೂಡ್ಸ್ ಆಟೋಗೆ (Goods Auto) ಕಿಡಿಗೇಡಿಗಳು ಬೆಂಕಿ ಹಚ್ಚಿ ವಿಕೃತಿ ಮೆರದಿರುವ ಘಟನೆ ಮಂಡ್ಯ (Mandya) ಜಿಲ್ಲೆಯ ನಾಗಮಂಗಲ ತಾಲೂಕಿನ ಕೆಂಬಾರೆ ಗ್ರಾಮದಲ್ಲಿ ಜರುಗಿದೆ.
ಕೆಂಬಾರೆ ಗ್ರಾಮದ ಗೀತಾ ಮಹೇಶ್ ಎಂಬುವವರಿಗೆ ಸೇರಿದ ಗೂಡ್ಸ್ ಆಟೋಗೆ ಕಿಡಿಗೇಡಿಗಳು ಬೆಂಕಿ ಹಾಕಿದ್ದಾರೆ. ಇದನ್ನೂ ಓದಿ: ಪರೀಕ್ಷಾ ಸಿಬ್ಬಂದಿ ಜನಿವಾರ ತೆಗೆಯಬೇಕು ಅಂದಿದ್ದು ತಪ್ಪು, ಅಂತಹ ಯಾವುದೇ ಮಾರ್ಗಸೂಚಿ ಇಲ್ಲ: ಕೆಇಎ
ಜೀವನೋಪಾಯಕ್ಕಾಗಿ ಆಟೋ ಇಟ್ಟುಕೊಂಡಿದ್ದ ಗೀತಾ ಮಹೇಶ್ ದಂಪತಿ ಹಳ್ಳಿಗಳಿಗೆ ಆಟೋದಲ್ಲಿ ತೆರಳಿ ಮಕ್ಕಳ ಆಟಿಕೆಗಳ ವ್ಯಾಪಾರ ಮಾಡುತ್ತಿದ್ದರು. ಕಳೆದ ರಾತ್ರಿ ವ್ಯಾಪಾರ ಮುಗಿಸಿ ಇಬ್ಬರು ಮನೆಗೆ ಬಂದಿದ್ದರು. ಬಳಿಕ ತಡರಾತ್ರಿ ದುಷ್ಕರ್ಮಿಗಳು ಆಟೋಗೆ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾರೆ. ಇದನ್ನೂ ಓದಿ: ಹಿಂದೂಗಳ ಮೇಲಿನ ದಾಳಿಯಂತೆ ಪ್ರತಿಬಿಂಬಿಸುವ ಪ್ರಯತ್ನ – ಬಾಂಗ್ಲಾದೇಶಕ್ಕೆ ವಿದೇಶಾಂಗ ಸಚಿವಾಲಯ ತಿರುಗೇಟು
ಇದರಿಂದ ಆಟೋ ಸಮೇತ ಒಳಗಿದ್ದ ಪ್ಲಾಸ್ಟಿಕ್ ಆಟಿಕೆ ವಸ್ತುಗಳು ಸುಟ್ಟು ಕರುಕಲು ಆಗಿವೆ. ಈ ಘಟನೆಯಿಂದಾಗಿ ಈ ಬಡ ಕುಟುಂಬಕ್ಕೆ 7 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ. ಕಿಡಿಗೇಡಿಗಳ ಈ ದುಷ್ಕೃತ್ಯದಿಂದ ಇಡೀ ಕುಟುಂಬ ಕಂಗಾಲಾಗಿದೆ. ಜೀವನೋಪಾಯಕ್ಕೆ ಇದ್ದ ಬದುಕನನ್ನು ಕಸಿದು ಕೊಂಡವರ ವಿರುದ್ಧ ದಂಪತಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಪರಿಹಾರ ನೀಡಿ ಬದುಕು ಕಟ್ಟಿಕೊಳ್ಳಲು ನೆರವು ನೀಡಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಆನೇಕಲ್ | ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿ ವ್ಯಕ್ತಿ ಆತ್ಮಹತ್ಯೆ
ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಲೇಸರ್ ಲೈಟ್ ಎಫೆಕ್ಟ್, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್ ಸಾಹಸದಿಂದ ಉಳಿಯಿತು ನೂರಾರು ಜೀವ