ಶಿವಮೊಗ್ಗ: ರಾಗಿಗುಡ್ಡದ ಬ್ರಹ್ಮ ವಿಷ್ಣು ಮಹೇಶ್ವರ ದೇವಸ್ಥಾನದ ರಥಕ್ಕೆ (Temple Chariot) ಪೆಟ್ರೋಲ್ ಸುರಿದು ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಘಟನೆಯಿಂದ ರಥ ಬಹುಪಾಲು ಹಾನಿಗೊಳಗಾಗಿದೆ. ಮಾ.4 ರಂದು ಸಂಜೆ 4 ಗಂಟೆ ಹೊತ್ತಿಗೆ ಘಟನೆ ನಡೆದಿದೆ ಎಂದು ದೇವಸ್ಥಾನದ ಅರ್ಚಕ ರಾಘವೇಂದ್ರ ದೂರು ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವಳು ಮತ್ತೊಬ್ಬನೊಂದಿಗೆ ಮದುವೆಯಾಗಿ ಚೆನ್ನಾಗಿರುವುದನ್ನು ಸಹಿಸದೇ ಗೃಹಿಣಿಯ ಕೊಲೆಗೈದ ಪಾಗಲ್ ಪ್ರೇಮಿ
ಮಾಸ್ಕ್ (Mask) ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ರಥಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆ (Shivamogga Rural Police Station) ಯಲ್ಲಿ ಪ್ರಕರಣ ದಾಖಲಾಗಿದೆ.