ಬೆಂಗಳೂರು: ಪ್ರೀತಿ ವಿಚಾರಕ್ಕೆ ದುಷ್ಕರ್ಮಿಗಳು ಯುವಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ನಗರದ ಕಣಮಿಣಿಕೆ ಟೋಲ್ ಬಳಿ ನಡೆದಿದೆ. ಆರ್ ಆರ್ ನಗರದ ನಿವಾಸಿ ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಪುತ್ರ ಶಶಾಂಕ್ (18) ಎಂಬಾತನ ಮೇಲೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ನಗರದ ಖಾಸಗಿ ಕಾಲೇಜಿನಲ್ಲಿ (College) ಯುವಕ ಸಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ. ಶಶಾಂಕ್ ತನ್ನ ಸಂಬಂಧಿಕರ ಮಗಳೊಬ್ಬಳನ್ನು ಪ್ರೀತಿಸುತಿದ್ದ. ಇದಕ್ಕೆ ಯುವತಿಯ ಪೋಷಕರ ವಿರೋಧವಿತ್ತು. ಇದೇ ಕಾರಣಕ್ಕೆ ಕಾಲೇಜ್ ಬಳಿ ಇದ್ದ ಯುವಕನನ್ನು ಇನ್ನೋವಾ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಕಿಡ್ನಾಪ್ ಮಾಡಿ ಕೈ ಕಾಲು ಕಟ್ಟಿ ಬೆಂಕಿ ಹಚ್ಚಿದ್ದಾರೆ. ಇದನ್ನೂ ಓದಿ: ತವರು ಮನೆ ಸೇರಿದ್ದ ಪತ್ನಿಯನ್ನು ಚುಚ್ಚಿ ಕೊಂದ ಪತಿ
ಶನಿವಾರ ಬೆಳಗ್ಗೆ 8 ಗಂಟೆಗೆ ಕಾಲೇಜ್‍ಗೆ ಶಶಾಂಕ್ ತಂದೆ ರಂಗನಾಥ್ ಡ್ರಾಪ್ ಮಾಡಿ ಹೋಗಿದ್ದರು. ಬಳಿಕ 8:45 ಕ್ಕೆ ತರಗತಿಗಳು ಇಲ್ಲದ ಕಾರಣ ಮನೆಗೆ ವಾಪಸ್ ಆಗುತ್ತಿದ್ದ. ಈ ವೇಳೆ ಆರ್‍ಆರ್ ನಗರ ಕಾಲೇಜ್ ಬಳಿ ಶಶಾಂಕ್‍ನನ್ನ ಅಡ್ಡಗಟ್ಟಿದ 6 ಜನರ ತಂಡ, ಬಾಯಿ ಹಾಗೂ ಕೈ ಕಾಲುಗಳಿಗೆ ಬಟ್ಟೆ ಕಟ್ಟಿ ಅಪಹರಿಸಿದೆ. ಬಳಿಕ ಕಣಮಿಣಿಕೆ ಟೋಲ್ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಈ ದುಷ್ಕೃತ್ಯ ಎಸಗಿದ್ದಾರೆ. ನಂತರ ತಾನೇ ಬೆಂಕಿ ಆರಿಸಿಕೊಂಡು ಯುವಕ ಸ್ನೇಹಿತರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದ ಸ್ನೇಹಿತರು ಆತನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಇತ್ತೀಚೆಗೆ ಮೈಸೂರಿನಿಂದ (Mysuru) ಬೆಂಗಳೂರಿಗೆ (Bengaluru) ಬಂದಿದ್ದ ಯುವತಿಯನ್ನು ಶಶಾಂಕ್ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಯುವತಿಯ ಪೋಷಕರು ಆತನ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಇದಾದ ಬಳಿಕ ಯುವತಿಯ ವಿಚಾರದಿಂದ ದೂರ ಇರುತ್ತೇನೆ ಎಂದು ಶಶಾಂಕ್ ಹೇಳಿದ್ದ. ಆದರೆ ಇದೀಗ ದುಷ್ಕರ್ಮಿಗಳು ಶಶಾಂಕ್ ಮೇಲೆ ವಿಕೃತಿ ಮೆರೆದಿದ್ದಾರೆ.
ಈ ಸಂಬಂಧ ಆರೋಪಿಗಳಾದ ಮನು ಹಾಗೂ ತಂಡದ ವಿರುದ್ಧ ಕುಂಬಳಗೋಡು ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಕಾವೇರಿ ಹಿನ್ನೀರಿನಲ್ಲಿ ಈಜಲು ಹೋದ ಮೂವರು ಯುವಕರು ನಾಪತ್ತೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]