ರಾಮನಗರ: ಆಸ್ತಿ ವಿಚಾರವಾಗಿ ದಾಯಾದಿಗಳ ನಡುವಿನ ಕಲಹದ ಹಿನ್ನೆಲೆಯಲ್ಲಿ ಮನೆಯ ಮುಂದಿನ ನೀರಿನ ಸಂಪ್ ಗೆ ಕ್ರಿಮಿನಾಶಕ, ಆಸಿಡ್ ಮಿಶ್ರಣ ಮಾಡಿರುವ ಘಟನೆ ರಾಮನಗರ ತಾಲೂಕಿನ ಅಂಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
ತಡರಾತ್ರಿ ಗ್ರಾಮದ ರಮೇಶ್, ನಾಗರಾಜ್ ಎಂಬವರ ಮನೆಯ ಮುಂದಿನ ನೀರಿನ ಸಂಪ್ ಗೆ ಕಿಡಿಗೇಡಿಗಳು ಮಾವಿನ ಮರಕ್ಕೆ ಸಿಂಪಡಿಸುವ ಕ್ರಿಮಿನಾಶಕ ಹಾಗೂ ಆಸಿಡ್ ಮಿಶ್ರಣ ಮಾಡಿದ್ದಾರೆ. ತಡರಾತ್ರಿ ಮನೆಯ ನೀರಿನ ಸಂಪ್ ಗೆ ಕ್ರಿಮಿನಾಶಕ ಬೆರೆಸಿದ್ದಾರೆ.
ತಿರುಗಾಡುವ ದಾರಿಯ ವಿಷಯಕ್ಕೆ ಜಗಳವಾಗುತ್ತಿತ್ತು. ಆಗ ಊರಿನ ಪ್ರಮುಖರು ರಾಜಿ ಸಂಧಾನ ಮಾಡಿಸಿದ್ದರು. ಆಗ ಇಬ್ಬರು ಕಾಂಪೌಂಡ್ ನಿರ್ಮಿಸಲು ನಿರ್ಧರಿಸಿದ್ದೇವು. ಶುಕ್ರವಾರ ರಾತ್ರಿ ನನ್ನ ಅಣ್ಣ ನೀರಿನ ಸಂಪ್‍ಗೆ ಕ್ರಿಮಿನಾಶಕ ಹಾಗೂ ಆಸಿಡ್ ಬೆರೆಸಿದ್ದಾನೆ. ಬೆಳಗ್ಗೆ ಎದ್ದು ನೋಡಿದ್ದಾಗ ನೀರು ಬೇರೆ ಬಣ್ಣಕ್ಕೆ ತಿರುಗಿತ್ತು ಎಂದು ರಮೇಶ್ ಆರೋಪಿಸಿದ್ದಾರೆ.
ಬೆಳ್ಳಗೆ ನೀರು ತೆಗೆದುಕೊಳ್ಳಲು ಹೋದ ವೇಳೆ ನೀರು ಬೇರೆ ಬಣ್ಣಕ್ಕೆ ತಿರುಗಿ ವಾಸನೆ ಬರುತಿತ್ತು. ಅಲ್ಲದೇ ನೀರಿನಲ್ಲಿ ಕ್ರಿಮಿನಾಶಕ ಮಿಶ್ರಣದಿಂದ ನೊರೆ ಬಂದಿತ್ತು. ಇದರಿಂದ ಆತಂಕಗೊಂಡ ಮನೆಯವರು ನೀರು ಬಳಸದೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಸಂಬಂಧಿಕರೇ ಆಸ್ತಿ ವ್ಯಾಜ್ಯ ಹಿನ್ನೆಲೆಯಲ್ಲಿ ನೀರಿಗೆ ವಿಷ ಬೆರೆಸಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ.
ಈ ಸಂಬಂಧ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv