ಎಣ್ಣೆ ಮತ್ತಲ್ಲಿ ಕಾಮುಕರ ಪುಂಡಾಟ- ಟೆಕ್ಕಿ ಪತ್ನಿ ಹಿಂಬದಿ ಸ್ಪರ್ಶಿಸಿ ಅಸಭ್ಯ ವರ್ತನೆ

New Year 1

ಬೆಂಗಳೂರು: ಎಣ್ಣೆ ಮತ್ತಲ್ಲಿ ಕಾಮುಕರು ಪುಂಡಾಟ ಮೆರೆದಿದ್ದು, ಬೆಂಗಳೂರಿನಲ್ಲಿ ಟೆಕ್ಕಿ ಪತ್ನಿ ಜತೆ ಅಸಭ್ಯವಾಗಿ ವರ್ತಿಸಿದ ಘಟನೆ ಕಳೆದ ರಾತ್ರಿ ಸುಮಾರು 1 ಗಂಟೆಗೆ ನಡೆದಿದೆ.

31 ವರ್ಷದ ಮಹಿಳೆಯ ಹಿಂಬದಿಯನ್ನು ಸ್ಪರ್ಶಿಸಿ ಕಾಮುಕರು ಅಸಭ್ಯವಾಗಿ ವರ್ತಿಸಿದ್ದಾರೆ. ಹೊಸ ವರ್ಷ ಸಂಭ್ರಮಾಚರಣೆ ಬಳಿಕ ಎಂ.ಜಿ ರಸ್ತೆಯಿಂದ ಮನೆಗೆ ತೆರಳುತ್ತಿದ್ದ ದಂಪತಿಗೆ ಕಾಮುಕರು ಕಿರುಕುಳ ನೀಡಿದ್ದಾರೆ. ರಿಚ್ಮಂಡ್ ಸರ್ಕಲ್ ಬಳಿ ಗುಂಪಿನಲ್ಲಿ ಬಂದ ಮೂವರು ಕಿಡಿಗೇಡಿಗಳು ಈ ಕೃತ್ಯವೆಸೆಗಿದ್ದಾರೆ.

ಕಾಮುಕರ ಪುಂಡಾಟದ ಬಗ್ಗೆ ಮಹಿಳೆ ಕೂಡಲೇ ತನ್ನ ಪತಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪತಿ ಪುಂಡರ ಕೃತ್ಯವನ್ನು ಪ್ರಶ್ನಿಸಿದ್ದಕ್ಕೆ ಕಿಡಿಗೇಡಿಗಳು ಪತಿಯನ್ನು ಥಳಿಸಿ, ಮೊಬೈಲ್ ಕಸಿದು ಬೆದರಿಕೆ ಹಾಕಿದ್ದಾರೆ. ಸಂತ್ರಸ್ಥೆ ಪತಿ ಕೂಡಲೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

New Year 8

ದಂಪತಿ ಮೂಲತಃ ಬಿಹಾರದವರಾಗಿದ್ದು, ಜಯನಗರದಲ್ಲಿ ವಾಸಿಸುತ್ತಿದ್ದಾರೆ. ಸೋಮವಾರ ಹೊಸ ವರ್ಷ ಆಚರಣೆಗಾಗಿ ದಂಪತಿ ಆಗಮಿಸಿದ್ದರು. ಈ ವೇಳೆ ಕಿಡಿಗೇಡಿಗಳು ಈ ರೀತಿಯ ಕೃತ್ಯ ಎಸಗಿದ್ದಾರೆ. ಈ ಬಗ್ಗೆ ದಂಪತಿ ಅಶೋಕನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರಿನ ಹಿನ್ನಲೆಯಲ್ಲಿ ಕೃತ್ಯ ಎಸಗಿದ ಪುಂಡರ ವಿರುದ್ಧ ಅಶೋಕ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯುವುದು) 504(ಶಾಂತಿ ಭಂಗ), 506(ಜೀವ ಬೆದರಿಕೆ) 323(ದರೋಡೆ ಯತ್ನ) ಅಡಿ ಕೇಸ್ ದಾಖಲಾಗಿದ್ದು, ಪೊಲೀಸರು ಶಂಕಿತ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *