ಶಿಲ್ಲಾಂಗ್: ಪೂರ್ವ ಖಾಸಿ ಹಿಲ್ಸ್‌ನ ನೊಂಗ್‌ಮೆನ್‌ಸಾಂಗ್ ಪ್ರದೇಶದಲ್ಲಿ ಉಪ ಮುಖ್ಯಮಂತ್ರಿ ಸ್ನಿಯಾವ್‌ಭಾಲಾಂಗ್ ಧರ್ (Sniawbhalang Dhar) ಅವರ ನಿವಾಸದ ಮೇಲೆ ಶುಕ್ರವಾರ ಅಪರಿಚಿತ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ (Petrol Bomb) ಎಸೆದಿದ್ದಾರೆ.
ವಸ್ತುವು ಪೆಟ್ರೋಲ್ ಬಾಂಬ್ ಆಗಿದೆಯೇ ಎಂದು ನಾವು ಇನ್ನೂ ತನಿಖೆ ನಡೆಸುತ್ತಿದ್ದೇವೆ. ಈ ಕುರಿತು ಹೆಚ್ಚಿನ ವಿವರಗಳು ಹೊರಬಂದ ನಂತರ ನಾವು ಸ್ಪಷ್ಟನೆ ನೀಡಲಿದ್ದೇವೆ ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ರಿತುರಾಜ್ ರವಿ ತಿಳಿಸಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಆರೋಗ್ಯವಾಗಿದ್ದಾರೆ, ಇನ್ಸುಲಿನ್ ಡೋಸ್ ಮುಂದುವರಿಸಲು ಏಮ್ಸ್ ಮೆಡಿಕಲ್ ಬೋರ್ಡ್ ಸಲಹೆ
ಡಿಸಿಎಂ ಅವರ ನಿವಾಸದಲ್ಲಿ ಲಭ್ಯವಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಯಾವ ಸಮಯದಲ್ಲಿ ಬಾಂಬ್ ಮಾದರಿ ವಸ್ತುವನ್ನು ಎಸೆಯಲಾಯಿತು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾವು ಈ ಸಂಬಂಧ ಪ್ರಕರಣವನ್ನು ದಾಖಲಿಸಿದ್ದೇವೆ. ನಾನು ಘಟನೆಯ ಸ್ಥಳಕ್ಕೆ ಭೇಟಿ ನೀಡಿದ್ದೇನೆ ಪರಿಶೀಲಿಸಿದ್ದೇನೆ. ಉಪ ಮುಖ್ಯಮಂತ್ರಿ ನಿವಾಸ ಮತ್ತು ನಗರದ ಎಲ್ಲಾ ಪ್ರಮುಖ ಪ್ರದೇಶಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ಒಳಗೆ ಆಯತಪ್ಪಿ ಬಿದ್ದ ದೀದಿ- ಸಣ್ಣಪುಟ್ಟ ಗಾಯ
ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಎಂ ಧಾರ್, ದಾಳಿಗೆ ಕಾರಣರಾದ ಯಾರನ್ನೂ ಬಿಡುವುದಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ ಎಂದು ತಿಳಿಸಿದ್ದಾರೆ.