ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪುಂಡರ ಹಾವಳಿ ಮಿತಿ ಮೀರಿದೆ. ಇಬ್ಬರು ಯುವಕರು ಬಸ್ ಹತ್ತಿದ್ದ ಯುವತಿಯನ್ನು ಫಾಲೋ ಮಾಡಿ ಚುಡಾಯಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ.
ಇಬ್ಬರು ಯುವಕರು ಯುವತಿಯೊಬ್ಬಳನ್ನು ಫಾಲೋ ಮಾಡಿಕೊಂಡು ಬಂದಿದ್ದಾರೆ. ಬಳಿಕ ಆ ಯುವತಿ ಬಿಎಂಟಿಸಿ ಬಸ್ ಹತ್ತಿದ್ದರೂ ಆ ಇಬ್ಬರು ಯುವಕರು ಆಕೆಯನ್ನು ಬಿಡಲಿಲ್ಲ. ಬೆಂಗಳೂರಿನ ಇಂದಿರಾನಗರದದಿಂದ ಬೈಯ್ಯಪ್ಪನಲ್ಲಿವೆರಗೂ ಬಸ್ ಫಾಲೋ ಮಾಡಿ ಯುವತಿಯನ್ನು ಚೇಡಿಸಿದ್ದಾರೆ.
ಯುವಕರು ತಮ್ಮ ಡಿಯೋ ಬೈಕಿನಲ್ಲಿ ಹೆಲ್ಮೆಟ್ ಧರಿಸದೇ ಬಿಎಂಟಿಸಿ ಬಸ್ ಅನ್ನು ಫಾಲೋ ಮಾಡಿದ್ದಾರೆ. ಬಸ್ ಚಲಿಸುತ್ತಿರುವಾಗಲೇ ಬಸ್‍ನ ಕಿಟಕಿ ಬಳಿ ಹೋಗಿ ಯುವಕರು ಯುವತಿಯನ್ನು ಚುಡಾಯಿಸಿದ್ದಾರೆ. ಇಬ್ಬರು ಪುಂಡರ ಕೃತ್ಯವನ್ನು ನೋಡಿದ ಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಇಬ್ಬರು ಪುಂಡ ಯುವಕರಲ್ಲಿ ಅರುಣ್ ಎಂಬಾತನನ್ನು ಬಂಧಿಸಿದ್ದಾರೆ.
https://www.youtube.com/watch?v=fNpvVR8DCUw
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv