ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪುಡಿರೌಡಿಗಳು ಅಟ್ಟಹಾಸ ಮುಂದುವರಿಸಿದ್ದಾರೆ. ಅನಾಮಿಕ ವ್ಯಕ್ತಿಗಳು ರಾತ್ರೋರಾತ್ರಿ ಅವಿನ್ಯೂ ರೋಡ್ ನಲ್ಲಿರುವ ಎಸ್ಎಲ್ವಿ ಭವನ (SLV Bhavan) ವನ್ನು ಪುಡಿಗೈದಿದ್ದಾರೆ.
ರಾತ್ರಿ ಸುಮಾರು 30 ಮಂದಿ ಹೋಟೆಲ್ಗೆ ಸುತ್ತಿಗೆ ರಾಡ್ ತೆಗೆದುಕೊಂಡು ಬಂದು ಹೋಟೆಲ್ ನೆಲಸಮ ಮಾಡಿದ್ದಾರೆ. ಮಾಸ್ಕ್ ಮಂಕಿಕ್ಯಾಪ್ ಧರಿಸಿ ಬಂದು 7 ಮಂದಿ ಹೊಟೇಲ್ ಸಿಬ್ಬಂದಿಗೆ ಚಾಕು ತೋರಿಸಿ ಬೆದರಿಕೆ ಹಾಕಿ, ಮೊಬೈಲ್ ಕಿತ್ತುಕೊಂಡಿದ್ದಾರೆ.
ರಾತ್ರಿ 1-2 ಗಂಟೆ ವೇಳೆ ಈ ಕೃತ್ಯ ನಡೆದಿದೆ. ಹೋಟೆಲ್ ಗಣೇಶ್ ಮತ್ತು ಮೂರು ಜನ ಪಾರ್ಟ್ ನರ್ ಶಿಪ್ ನಲ್ಲಿ ನಡೆಯುತ್ತಿದೆ. ಜಾಗದ ಮಾಲೀಕತ್ವದ ವಿಚಾರದಲ್ಲಿ ಗಲಾಟೆಯಾಗಿತ್ತು ಎನ್ನಲಾಗಿದ್ದು, ಇದುವೇ ಕೃತ್ಯಕ್ಕೆ ಕಾರಣ ಅಂತ ಹೇಳಲಾಗುತ್ತಿದೆ. ಇದನ್ನೂ ಓದಿ: ಹಲವು ವಾಹನಗಳಿಗೆ ಡಿಕ್ಕಿ, ಕಾರನ್ನು 3 ಕಿ.ಮೀ ದೂಡಿಕೊಂಡೇ ಹೋದ ಬಸ್ – ಚಾಲಕ ಅರೆಸ್ಟ್
ಸದ್ಯ ಘಟನೆಯಿಂದ ಹೋಟೆಲ್ ನಡೆಸುತ್ತಿದ್ದವರು ಕಣ್ಣೀರು ಹಾಕಿದ್ದಾರೆ. ಅನ್ನ ಕೊಡುತ್ತಿದ್ದ ಹೋಟೆಲ್ ನ್ನು ಪುಡಿ ಮಾಡಿದ್ದಾರೆ, ಬದುಕು ಬೀದಿಗೆ ಅಂತಾ ಕಣ್ಣೀರು ಸುರಿಸಿದ್ದಾರೆ. ಸುಮಾರು ಹತ್ತು ಲಕ್ಷಕ್ಕಿಂತಲೂ ಹೆಚ್ಚು ನಷ್ಟವಾಗಿದೆ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k