ತುಮಕೂರು: ಫಸಲಿಗೆ ಬಂದಿದ್ದ 500 ಅಡಿಕೆ ಗಿಡಗಳನ್ನು ಕಿಡಿಗೇಡಿಗಳು ಕಡಿದಿರುವ ಘಟನೆ ಚಿಕ್ಕನಾಯಕನಹಳ್ಳಿ (Chikkanayakanahalli) ತಾಲೂಕಿನ ಬರಗೂರಿನಲ್ಲಿ (Baragur) ನಡೆದಿದೆ.
ಗಣೇಶ್ ಎಂಬ ರೈತರಿಗೆ ಸೇರಿದ ಅಡಿಕೆ ಗಿಡಗಳನ್ನು ರಾತ್ರಿ ವೇಳೆ ಕಿಡಿಗೇಡಿಗಳು ಕಡಿದು ಹಾಕಿದ್ದಾರೆ. ಗಣೇಶ್ ತೋಟಕ್ಕೆ ಬಂದು ನೋಡಿದಾಗ ಗಿಡ ಕಡಿದಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೂಲಿ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವಾಹನ ಪಲ್ಟಿ – 14 ಕೂಲಿ ಕಾರ್ಮಿಕರಿಗೆ ಗಾಯ, ನಾಲ್ವರ ಸ್ಥಿತಿ ಗಂಭೀರ
ಹಳೇ ದ್ವೇಷದ ಹಿನ್ನೆಲೆ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಿಡಿಗೇಡಿಗಳ ವಿರುದ್ಧ ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿಡಿಗೇಡಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಇದನ್ನೂ ಓದಿ: ಮೈಸೂರು: ಅವಹೇಳನಕಾರಿ ಪೋಸ್ಟ್ ವಿಚಾರಕ್ಕೆ ಠಾಣೆ ಮೇಲೆಯೇ ಕಲ್ಲು ತೂರಾಟ – 14 ಪೊಲೀಸರಿಗೆ ಗಾಯ