Chikkaballapur
ಕುಡಿದು ಅಡ್ಡಾದಿಡ್ಡಿ ಹೋಗ್ತಿದ್ದವರಿಗೆ ದಾರಿ ಬಿಡಿ ಎಂದಿದ್ದಕ್ಕೆ ಮನೆಗೆ ನುಗ್ಗಿ ಕುಟುಂಬಸ್ಥರ ಮೇಲೆ ಹಲ್ಲೆ

ಚಿಕ್ಕಬಳ್ಳಾಪುರ: ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿ ಹೋಗ್ತಿದ್ದವರು ದಾರಿ ಬಿಡಿ ಅಂತ ಕೇಳಿದ ವ್ಯಕ್ತಿಯ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಅಣಿಘಟ್ಟ ಗ್ರಾಮದಲ್ಲಿ ನಡೆದಿದೆ.
ಅಣಿಘಟ್ಟ ಗ್ರಾಮದ ಮಹೇಶ್ ಎಂಬವರು ಟ್ರಾಕ್ಟರ್‍ನಲ್ಲಿ ಹೋಗ್ತಿದ್ದ ವೇಳೆ ಲೋಕೇಶ್ ಮತ್ತು ಗಣೇಶ್ ದಾರಿ ಬಿಡದೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ರಸ್ತೆಯಲ್ಲಿ ಗಲಾಟೆಯಾಗಿದೆ. ಬಳಿಕ ಲೋಕೇಶ್ ಹಾಗೂ ಗಣೇಶ್ 20 ಜನರನ್ನ ಕರೆದುಕೊಂಡು ಬಂದು ಮಹೇಶ್ ಅವರ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಘಟನೆಯಲ್ಲಿ ಮಹೇಶ್ ಕುಟುಂಬದ ಜಯರಾಮಯ್ಯ, ಜಗಣ್ಣ, ಅಮೃತ್ ಹಾಗೂ ಜಯಮ್ಮ ಅವರಿಗೆ ತೀವ್ರ ಗಾಯಗಳಾಗಿದ್ದು, ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಶ್ವನಾಥಪುರ ಪೊಲೀಸರು ಈ ಬಗ್ಗೆ ಮಾಹಿತಿ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.
