ಬಾಗಲಕೋಟೆ: ಉಗ್ರರ ವಿರುದ್ಧ ಸಹಿ ಸಂಗ್ರಹ ನಾಮಫಲಕದ ಮೇಲೆ ಕಿಡಿಗೇಡಿ ಅಲ್ತಾಫ್ ಎಂದು ದೊಡ್ಡದಾಗಿ ಹೆಸರು ಬರೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಬಾಗಲಕೋಟೆ ನಗರದ ವಲ್ಲಭಭಾಯಿ ವೃತ್ತದಲ್ಲಿ ಹಾಕಲಾಗಿದ್ದ ಸಹಿ ಸಂಗ್ರಹ ನಾಮಫಲಕದಲ್ಲಿ ಕಿಡಿಗೇಡಿ ಅಲ್ತಾಫ್ ಎಂಬ ವ್ಯಕ್ತಿ, ಕಪ್ಪಕ್ಷರದ ಬರಹ ಬರೆದಿದ್ದಾನೆ. ಈ ಬರಹದ ಹಿಂದೆ ಸೈನ್ಯಕ್ಕೆ ಹೀಯಾಳಿಸುವ ಉದ್ದೇಶ ಎಂದು ಆರೋಪಿಸಿರುವ ಹಿಂದೂಪರ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದರು.
ಈ ವೇಳೆ ಕಿಡಿಗೇಡಿಯನ್ನು ಬಂಧಿಸುವಂತೆ ಒತ್ತಾಯ ಮಾಡಿದ ಹಿಂದೂಪರ ಸಂಘಟನಾ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದಿದ್ದರು. ಅಲ್ಲದೇ ಪೊಲೀಸರೊಂದಿಗೆ ಮಾತಿನ ಚಕಮಕಿ ಕೂಡಾ ನಡೆಸಿದರು. ನಂತರ ಎರಡು ಗುಂಪಿನವರನ್ನು ಚದುರಿಸಿದ ಪೊಲೀಸರು ಪರಿಸ್ಥಿತಿಯನ್ನು ಶಾಂತಗೊಳಿದರ್ರು.
ಶುಕ್ರವಾರ ಸಂಜೆ ಬಾಗಲಕೋಟೆ ವಲ್ಲಭ ಬಾಯಿ ವೃತ್ತದಲ್ಲಿ ಮಾಧವೆ ಸೇವಾ ಕೇಂದ್ರದ ವತಿಯಿಂದ ಹುತಾತ್ಮ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸೇವಾ ಕೇಂದ್ರ ವತಿಯಿಂದ ಸಾರ್ವಜನಿಕ ಸಹಿ ಸಂಗ್ರಹ ನಾಮಫಲಕ ಹಾಕಲಾಗಿತ್ತು. ಆದರೆ ಆ ಸಹಿ ಸಂಗ್ರಹದ ಫಲಕದ ಮೇಲೆ ಓರ್ವ ವ್ಯಕ್ತಿ ಅಲ್ತಾಫ್ ಎಂದು ಬರೆಯುವ ಮೂಲಕ ಸೈನಿಕರಿಗೆ ಹೀಯಾಳಿಸಿದ್ದಾನೆ, ಆತನನ್ನು ಕೂಡಲೇ ಬಂಧಿಸಿ ಎಂದು ಹಿಂದೂಪರ ಕಾರ್ಯಕರ್ತರು ಪೊಲೀಸರಿಗೆ ಒತ್ತಾಯಿಸಿದ್ದಾರೆ. ಕಾರ್ಯಕರ್ತರ ಅಹವಾಲು ಸ್ವೀಕರಿಸಿದ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv