ಮಾಲ್‌ನಲ್ಲಿ ಮಹಿಳೆಯರ ಜೊತೆ ಅನುಚಿತ ವರ್ತನೆ – ಆರೋಪಿ ಕೋರ್ಟ್‌ಗೆ ಶರಣು

Public TV
1 Min Read
LULU MALL copy

ಬೆಂಗಳೂರು: ಪ್ರತಿಷ್ಠಿತ ಮಾಲ್‌ವೊಂದರಲ್ಲಿ (Mall) ವ್ಯಕ್ತಿಯೋರ್ವ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸ್ವತ: ಕೋರ್ಟ್ (Court) ಮುಂದೆ ಸರೆಂಡರ್ (Surrender) ಆಗಿದ್ದಾನೆ.

ಅಶ್ವಥ್ ನಾರಾಯಣ್ (60) ನ್ಯಾಯಾಲಯದ ಮುಂದೆ ಶರಣಾದ ಆರೋಪಿ. ಈತ ಬೆಂಗಳೂರಿನ (Bengaluru) ಮಾಲ್‌ವೊಂದರಲ್ಲಿ ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ್ದು, ಯಶವಂತ್ ಎಂಬವರು ಅದನ್ನು ವಿಡಿಯೋ ಮಾಡಿದ್ದರು. ವಿಡಿಯೋ ಆಧಾರದ ಮೇಲೆ ಪೊಲೀಸರು ಆರೋಪಿಯ ಗುರುತನ್ನು ಪತ್ತೆಹಚ್ಚಿದ್ದರು. ಐಪಿಸಿ ಸೆಕ್ಷನ್ 354 ಎ, 294, 509 ಅಡಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದನ್ನೂ ಓದಿ: ಹಾಸನ ಕಾಲೇಜಿನ 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇಂದು ಆರೋಪಿ ಅಶ್ವಥ್ ನಾರಾಯಣ್ ಎಸಿಎಂಎಂ 2ರ ನ್ಯಾಯಾಧೀಶರ ಮುಂದೆ ಸರೆಂಡರ್ ಆಗಿದ್ದು, ನ್ಯಾಯಾಧೀಶರು ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ. ಆರೋಪಿ ಪರ ಹಿರಿಯ ವಕೀಲ ಕೆಎನ್ ಶಶಿಧರ್ ವಾದ ಮಂಡಿಸಿದರು. ಇದನ್ನೂ ಓದಿ: ನಡೆದುಕೊಂಡು ಹೋಗ್ತಿದ್ದ ಇಬ್ಬರ ಮೇಲೆ ಹರಿದ ಬೈಕ್- ಸವಾರ, ಪಾದಾಚಾರಿ ದುರ್ಮರಣ

Web Stories

Share This Article