ಜೆರುಸಲೆಂ: ಕೈ, ಕಾಲುಗಳು ಮುರಿದರೆ ಅದನ್ನು ವೈದ್ಯರು ಜೋಡಿಸಿದ್ದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಇಸ್ರೇಲ್‍ನ ವೈದ್ಯರು (Israel Doctor) ಪವಾಡವೆಂಬಂತೆ ಬಾಲಕನೊಬ್ಬನ ದೇಹಕ್ಕೆ ತಲೆಯನ್ನು (Reattached Boy’s Head) ಜೋಡಿಸುವ ಮೂಲಕ ಭಾರೀ ಸುದ್ದಿಯಾಗುವುದರ ಜೊತೆಗೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Last month, Suleiman, a 12 year old Palestinian boy was in a horrific car accident while riding his bike.
He sustained life threatening injuries when his head was severed from his neck.
The child was airlifted to the Hadassah Medical Center and underwent an emergency… pic.twitter.com/wTuQ1IZH3Q
— Israel ישראל ???????? (@Israel) July 11, 2023
Advertisement
ಸುಲೈಮನ್ ಹಾಸನ್ (Suleiman Hassan) ಎಂಬ 12 ವರ್ಷದ ಬಾಲಕ ಸೈಕಲ್‍ನಲ್ಲಿ ಹೋಗುತ್ತಿದ್ದ. ಈ ವೇಳೆ ಕಾರು ಅಪಘಾತಕ್ಕೀಡಾಗಿ (Car Accident) ಕುತ್ತಿಗೆ ಮುರಿದುಕೊಂಡಿದ್ದ. ಕೂಡಲೇ ಆತನನ್ನು ಹಡಸ್ಸಾ ವೈದ್ಯಕೀಯ ಕೇಂದ್ರಕ್ಕೆ ವಿಮಾನದಲ್ಲಿ (Airlift) ಸಾಗಿಸಲಾಯಿತು. ಅಲ್ಲಿ ಬಾಲಕನನ್ನು ಪರೀಕ್ಷೆ ನಡೆಸಿದ ವೈದ್ಯರು, ಬಾಲಕನ ತಲೆಯು ಕತ್ತಿನ ಬುಡದಿಂದ ಬಹುತೇಕ ಸಂಪೂರ್ಣವಾಗಿ ಬೇರ್ಪಟ್ಟಿದೆ ಎಂದು ಹೇಳಿದ್ದರು. ತಕ್ಷಣವೇ ಆತನನ್ನು ತುರ್ತು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು.
Advertisement
ಚಿಕಿತ್ಸೆಯ ಮೇಲ್ವಿಚಾರಣೆ ವಹಿಸಿದ್ದ ಮೂಳೆ ಶಸ್ತ್ರಚಿಕಿತ್ಸಕ ಡಾ. ಓಹದ್ ಐನಾವ್ ಪ್ರತಿಕ್ರಿಯಿಸಿ, ಶಸ್ತ್ರಚಿಕಿತ್ಸೆ ನಡೆಸಲು ಹಲವಾರು ಗಂಟೆಗಳನ್ನು ತೆಗೆದುಕೊಳ್ಳಲಾಯಿತು. ಮಗುವನ್ನು ಉಳಿಸಿಕೊಳ್ಳಲು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಬಾಲಕನ ತಲೆಯನ್ನು ಮರು ಜೋಡಣೆ ಮಾಡಿದ್ದೇವೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
Advertisement
Advertisement
ಅಪಘಾತಕ್ಕೀಡಾಗಿದ್ದ ಬಾಲಕ ಕೇವಲ 50% ನಷ್ಟು ಮಾತ್ರ ಬದುಕುಳಿಯುವ ಸಾಧ್ಯತೆಗಳಿತ್ತು. ಆದರೆ ಇದೀಗ ಶಸ್ತ್ರಚಿಕಿತ್ಸೆಯ ಮೂಲಕ ಬಾಲಕನಿಗೆ ಮರು ಜೀವ ಬಂದಿದೆ ಎಂದರೆ ನಿಜಕ್ಕೂ ಇದು ಪವಾಡ ಎಂದು ವೈದ್ಯರು ಬಣ್ಣಿಸಿದರು. ಇದನ್ನೂ ಓದಿ: ಟೆಸ್ಟಿಂಗ್ ವೇಳೆ ರಾಕೆಟ್ ಎಂಜಿನ್ ಸ್ಫೋಟ – ಜಪಾನ್ ಬಾಹ್ಯಾಕಾಶ ಸಂಸ್ಥೆಗೆ ಮತ್ತೆ ನಿರಾಸೆ
ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಹೊಂದಿರುವ ಇಸ್ರೇಲ್‍ನ ಬೆರಳೆಣಿಕೆಯಷ್ಟು ಮಂದಿ ಮೂಳೆ ಶಸ್ತ್ರಚಿಕಿತ್ಸಕರು ಈ ಪ್ರಯೋಗ ಮಾಡಿದ್ದಾರೆ. ಇದು ಸಾಮಾನ್ಯವಾದ ಸರ್ಜರಿಯಾಗಿರಲಿಲ್ಲ. ಈ ಶಸ್ತ್ರಚಿಕಿತ್ಸೆಯನ್ನು ಮಾಡಲು ಒಬ್ಬ ಸರ್ಜನ್‍ಗೆ ಅತ್ಯದ್ಭುತ ಜ್ಞಾನ ಹಾಗೂ ಅನುಭವವಿರಬೇಕಾಗುತ್ತದೆ ಎಂದರು.
ಶಸ್ತ್ರಚಿಕಿತ್ಸೆ ಕಳೆದ ತಿಂಗಳು ನಡೆದಿದೆ. ಆದರೆ ಬಾಲಕ ಪೂರ್ತಿ ಹುಷಾರಾಗುವವರೆಗೆ ಇದುವರೆಗೂ ಯಾವುದನ್ನೂ ವೈದ್ಯರು ಬಹಿರಂಗಪಡಿಸಿರಲಿಲ್ಲ. ಸದ್ಯ ಬಾಲಕನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಎಲ್ಲರಂತೆ ಆತ ಓಡಾಡುತ್ತಿದ್ದಾನೆ ಎಂದು ಹೇಳಿದರು.
ಬಾಲಕನ ತಂದೆ ಪ್ರತಿಕ್ರಿಯಿಸಿ, ಮೊದಲು ಮಗನನ್ನು ಬದುಕಿಸಿದ ಆಸ್ಪತ್ರೆಯ ಸರ್ಜನ್‍ಗಳಿಗೆ ಧನ್ಯವಾದಗಳನ್ನು ಸಮರ್ಪಿಸಿದರು. ವೈದ್ಯರ ವೃತ್ತಿಪರತೆ, ತಂತ್ರಜ್ಞಾನ ಹಾಗೂ ತಕ್ಷಣದ ನಿರ್ಧಾರದಿಂದ ಇಂದು ನನ್ನ ಮಗ ನಮ್ಮ ಕಣ್ಣ ಮುಂದೆ ಓಡಾಡುವಂತಾಗಿದೆ. ಇದಕ್ಕೆಲ್ಲಾ ಕಾರಣಕರ್ತರಾದ ಆಸ್ಪತ್ರೆಯ ಸಿಬ್ಬಂದಿ, ಸರ್ಜನ್‍ಗಳಿಗೆ ನನ್ನ ದೊಡ್ಡ ನಮಸ್ಕಾರ ಎಂದು ಹೇಳುತ್ತಾ ಆನಂದ ಭಾಷ್ಪ ಸುರಿಸಿದ್ದಾರೆ.
Web Stories