ಚೆನ್ನೈ: ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‌ಪ್ರೆಸ್ ನಿಲ್ಲಿಸಿದ್ದರಿಂದ ತಾಯಿ ಮತ್ತು 9 ತಿಂಗಳ ಮಗು ಅದೃಷ್ಟವಶಾತ್ ಪಾರಾದ ಘಟನೆ ಮಂಗಳವಾರ ತಮಿಳುನಾಡಿನ ಕಟಪಾಡಿ ರೈಲ್ವೆ ಜಂಕ್ಷನ್‍ನಲ್ಲಿ ನಡೆದಿದೆ.
ಯುವರಾಣಿ (37) ಮಹಿಳೆ ಹಾಗೂ ಮಗು ಅದೃಷ್ಟವಶಾತ್ ಪಾರಾದವರು. ತಾಯಿ ಮಗುವನ್ನು ಕೈಯಲ್ಲಿ ಹಿಡಿದುಕೊಂಡು ಕಟಪಾಡಿ ರೈಲ್ವೆ ಜಂಕ್ಷನ್ ದಾಟುತ್ತಿದ್ದರು. ಈ ವೇಳೆ ರೈಲು ಹಳಿಯನ್ನು ಎಡವಿ ಕಾಲು ಜಾರಿ ಇಬ್ಬರೂ ರೈಲು ಹಳಿ ಮೇಲೆ ಬಿದ್ದಿದ್ದಾರೆ. ಇದನ್ನೂ ಓದಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚು ಗೆದ್ದಿದ್ದ ಬಾಕ್ಸರ್ ಲವ್ಲಿನಾ ಈಗ ಡಿಎಸ್‌ಪಿ
ರೈಲು ಬರುತ್ತಿರುವ ಸಂದರ್ಭದಲ್ಲಿ ರೈಲ್ವೇ ಹಳಿಗಳು ಲೈನ್ ಚೇಂಜ್ ಆಗುತ್ತಿರುವದನ್ನು ಯುವರಾಣಿಯವರು ಗಮನಿಸಿರಲಿಲ್ಲ. ಈ ವೇಳೆ ಅವರು ರೈಲು ಬರುತ್ತಿರುವುದನ್ನು ಕಂಡು ಆಘಾತಕ್ಕೊಳಗಾಗಿ ಅವರಿಗೆ ಚಲಿಸಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಕಂಡ ರೈಲ್ವೇ ಅಧಿಕಾರಿಗಳು ಎರ್ನಾಕುಲಂ ಎಕ್ಸ್‍ಪ್ರೆಸ್‍ನ್ನು ಸರಿಯಾದ ಸಮಯಕ್ಕೆ ನಿಲ್ಲಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಇದನ್ನೂ ಓದಿ: ನೆಟ್ಟಿಗರ ಆಕ್ರೋಶಕ್ಕೆ ಮಣಿದು ಸೈನಾ ಬಳಿ ಕ್ಷಮೆಯಾಚಿಸಿದ ಸಿದ್ದಾರ್ಥ್
ಯುವರಾಣಿ ತಲೆಗೆ ಗಾಯವಾಗಿತ್ತು. ರೈಲ್ವೇ ಅಧಿಕಾರಿಗಳು ಮತ್ತು ಪ್ರಯಾಣಿಕರು ಅವರನ್ನು ಹಳಿಯಿಂದ ಮೇಲಕ್ಕೆತ್ತಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು. ಘಟನೆಯ ನಂತರ ಯುವರಾಣಿ ಆಘಾತಕ್ಕೊಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಯಿ ಮತ್ತು ಮಗುವನ್ನು ಚಿಕಿತ್ಸೆಗಾಗಿ ವೆಲ್ಲೂರು ಆಸ್ಪತ್ರೆಗೆ ದಾಖಲಿಸಲಾಗಿದೆ.