ಮುಂಬೈ: ಸಾಮಾನ್ಯವಾಗಿ ಹೃದಯಾಘಾತವಾಗಿ ಬದುಕುಳಿದ ಮಂದಿ ತುಂಬಾ ವಿರಳ. ಅಂತದ್ದರಲ್ಲಿ 6 ಬಾರಿ ಹೃದಯಾಘಾತವಾಗಿ 45 ದಿನದ ಪುಟ್ಟ ಮಗುವೊಂದು ಬದುಕುಳಿದ ಅಚ್ಚರಿಯ ಘಟನೆಯೊಂದು ನಡೆದಿದೆ.
ಹೌದು. ಮುಂಬೈನ ಕಲ್ಯಾಣ್ ನಿವಾಸಿಗಳಾದ ವಿಶಾಖ ಹಾಗೂ ವಿನೋದ್ ದಂಪತಿಯ ಪುತ್ರಿ ವಿಧಿಶಾ ಸತತ 12 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಬದುಕುಳಿದ ಪುಟಾಣಿ.
Advertisement
45 ದಿನದ ಈ ಪುಟ್ಟ ಕಂದಮ್ಮನಿಗೆ ಮೊದಲು ತಾಯಿಯ ಹಾಲು ಕುಡಿದ ತಕ್ಷಣವೇ ವಾಂತಿಯಾಗುತ್ತಿತ್ತು. ಅಲ್ಲದೇ ಕೂಡಲೇ ಪ್ರಜ್ಞೆ ತಪ್ಪುತ್ತಿತ್ತು. ಎಚ್ಚರಿಸಿದ್ರೂ ಮತ್ತೆ ಮತ್ತೆ ಹಾಗೇ ಆಗುತ್ತಿತ್ತು. ಈ ಘಟನೆ ನಮ್ಮನ್ನ ಬೆಚ್ಚಿ ಬೀಳಿಸಿತ್ತು. ಕೂಡಲೇ ಸ್ಥಳೀಯ ನರ್ಸಿಂಗ್ ಹೋಂ ಗೆ ಮಗುವನ್ನು ಕರೆತೆರಲಾಯಿತು. ಆದ್ರೆ ಅಲ್ಲಿನ ವೈದ್ಯರು ಆಕೆಯನ್ನು ಮುಂಬೈನ ಬಿಜೆ ವಾಡಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ರು. ಅಂತೆಯೇ ಆಕೆಯನ್ನು ಪರೀಕ್ಷಿಸಿದ ಅಲ್ಲಿನ ತಜ್ಞ ವೈದ್ಯ ಡಾ.ಬಿಸ್ವಾ ಪಂಡಾ ಹೃದಯದ ತೊಂದರೆ ಇರುವುದಾಗಿ ಪತ್ತೆ ಮಾಡಿದ್ದಾರೆ. ಬಳಿಕ ಮಾರ್ಚ್ 14ರಂದು 12 ಗಂಟೆಗಳ ಕಾಲ ಮಗುವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
Advertisement
Advertisement
ಸರ್ಜರಿ ಬಳಿಕ 51 ದಿನಗಳ ಕಾಲ ಮಗುವನ್ನು ಐಸಿಯುನಲ್ಲಿ ಇಡಲಾಗಿತ್ತು. ಈ ವೇಳೆ 6 ಬಾರಿ ಮಗುವಿಗೆ ಹೃದಯಾಘಾತವಾಗುವ ಹಂತಕ್ಕೆ ತಲುಪಿದ್ಳು. ಒಂದು ಬಾರಿ ಆಕೆಗೆ ಹೃದಯಘಾತವಾಗಿ ಚೇತರಿಕೆ ಕಾಣಲು ಆಕೆಗೆ 15 ನಿಮಿಷಗಳೇ ಬೇಕಾಗಿತ್ತು ಅಂತಾ ವೈದ್ಯರು ಹೇಳಿದ್ದಾರೆ.
Advertisement
ಮಗುವಿನ ಚಿಕಿತ್ಸೆಗೆ 5 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು ಆಸ್ಪತ್ರೆಯ ಶುಲ್ಕ ಕಟ್ಟಲು ನೆರವಾಗಿದ್ದಾರೆ. ಹಾಗೂ ಮಗುವಿನ ಹತ್ತವರಾದ ವಿಶಾಖಾ ಮತ್ತು ವಿನೋದ್ ಈಗಾಗಲೇ 25,000 ರೂ. ಅನ್ನು ಆಸ್ಪತ್ರೆಗೆ ನೀಡಿದ್ದಾರೆ.
ವಿಧಿಶಾಗೆ ಈಗ ನಾಲ್ಕು ತಿಂಗಳಾಗಿದ್ದು, ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾಳೆ. ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಲಿದ್ದಾಳೆ ಅಂತಾ ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ.