ಎಲ್ಲರ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ದೋಸೆ, ಚಪಾತಿ, ರೋಟಿ, ಪೂರಿಯಂತಹ ತಿಂಡಿಗಳನ್ನು ಮಾಡುವುದು ಸರ್ವೇ ಸಾಮಾನ್ಯ. ಇಂತಹ ತಿಂಡಿಗಳಿಗೆ ಸೈಡ್ ಡಿಶ್ ಏನಾದ್ರೂ ಇರ‍್ಲೇಬೇಕು. ಇದಕ್ಕೆ ಬೆಸ್ಟ್ ಡಿಶ್ ಎಂದರೆ ಆಲೂ ಫ್ರೈ . ಅದರಲ್ಲೂ ಪುದಿನಾ ಆಲೂ ಫ್ರೈ ಈ ರೀತಿಯಾದ ತಿಂಡಿಗಳಿಗೆ ಪರ್ಫೆಕ್ಟ್ ಕಾಂಬಿನೇಷನ್ ಎಂದರೆ ತಪ್ಪಾಗಲಾರದು. ಹಾಗಿದ್ದರೆ ಈ ರೆಸಿಪಿಯನ್ನು ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.
Advertisement
ಬೇಕಾಗುವ ಸಾಮಾಗ್ರಿಗಳು:
ಬೇಯಿಸಿದ ಆಲೂಗೆಡ್ಡೆ (ದೊಡ್ಡದು)- 5
ಕೊತ್ತಂಬರಿ ಸೊಪ್ಪು- 1 ಕಪ್
ಪುದಿನಾ ಸೊಪ್ಪು- ಅರ್ಧ ಚಮಚ
ಶುಂಠಿ- ಅರ್ಧ ಇಂಚು
ಹಸಿಮೆಣಸು- 4
ಜೀರಿಗೆ-1 ಚಮಚ
ಇಂಗು- ಕಾಲು ಚಮಚ
ಅರಶಿಣ- ಕಾಲು ಚಮಚ
ಚಿಲ್ಲಿ ಪೌಡರ್- ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ನಿಂಬೆ ರಸ- ಸ್ವಲ್ಪ
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು ಇದನ್ನೂ ಓದಿ: ಸಖತ್ ರುಚಿಯಾದ ಸ್ಟಾರ್ಟರ್ ರೆಸಿಪಿ – ಬೇಬಿ ಕಾರ್ನ್ ಪೆಪ್ಪರ್ ಫ್ರೈ ಮಾಡಿ
Advertisement
Advertisement
ಮಾಡುವ ವಿಧಾನ:
Advertisement
- ಮೊದಲಿಗೆ ಬೇಯಿಸಿದ ಆಲುಗೆಡ್ಡೆಯನ್ನು ಸಿಪ್ಪೆ ತೆಗೆದು ಕ್ಯೂಬ್ಸ್ ರೀತಿಯಲ್ಲಿ ಹೆಚ್ಚಿಕೊಳ್ಳಿ.
- ನಂತರ ಒಂದು ಮಿಕ್ಸಿ ಜಾರಿಗೆ ಕೊತ್ತಂಬರಿ ಸೊಪ್ಪು, ಪುದಿನಾ ಸೊಪ್ಪು, ಶುಂಠಿ, ನಿಂಬೆ ರಸ ಮತ್ತು ಹಸಿಮೆಣಸಿನಕಾಯಿಗಳನ್ನು ಹಾಕಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
- ಒಂದು ಕಡಾಯಿಗೆ ಸ್ವಲ್ಪ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಮೇಲೆ ಅದಕ್ಕೆ ಜೀರಿಗೆಯನ್ನು ಸೇರಿಸಿಕೊಳ್ಳಿ. ಜೀರಿಗೆ ಸ್ವಲ್ಪ ಕೆಂಪಾದ ಮೇಲೆ ಅದಕ್ಕೆ ಇಂಗು ಹಾಕಿಕೊಂಡು ತಿರುವಿಕೊಳ್ಳಿ.
- ಬಳಿಕ ಇದಕ್ಕೆ ರುಬ್ಬಿದ ಪೇಸ್ಟ್ ಅನ್ನು ಹಾಕಿಕೊಳ್ಳಬೇಕು. ಇದರ ಹಸಿವಾಸನೆ ಹೋಗುವವರೆಗೂ ಚನ್ನಾಗಿ ತಿರುವಿಕೊಂಡು ನಂತರ ಅದಕ್ಕೆ ಅರಶಿಣ, ಚಿಲ್ಲಿ ಪೌಡರ್ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
- ನಂತರ ಹೆಚ್ಚಿದ ಆಲೂಗೆಡ್ಡೆಗಳನ್ನು ಈ ಮಿಶ್ರಣಕ್ಕೆ ಸೇರಿಸಿಕೊಂಡು ಮಸಾಲೆಗಳು ಇದಕ್ಕೆ ಚನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರನ್ನು ಕೂಡಾ ಸೇರಿಸಿಕೊಳ್ಳಬಹುದು. ಉಪ್ಪು ಕಡಿಮೆ ಇದ್ದಲ್ಲಿ ಸ್ವಲ್ಪ ಉಪ್ಪನ್ನು ಸೇರಿಸಿಕೊಂಡು 2ರಿಂದ 3 ನಿಮಿಷಗಳವರೆಗೆ ಬೇಯಿಸಿಕೊಳ್ಳಿ.
- ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿಕೊಂಡು ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಬಿಸಿ ಬಿಸಿಯಾದ ಪುದಿನಾ ಆಲೂ ಫ್ರೈ ಚಪಾತಿ ಪೂರಿಯೊಂದಿಗೆ ಸವಿದು ಆನಂದಿಸಿ. ಇದನ್ನೂ ಓದಿ: ಕ್ಷಣಮಾತ್ರದಲ್ಲೇ ಮೊಸರು ಬೋಂಡಾ ಮಾಡೋದು ಹೇಗೆ?