ಚಿಕ್ಕಬಳ್ಳಾಪುರ: ಕಾಲೇಜಿನಲ್ಲಿ ಎಲ್ಲ ಹುಡುಗಿಯರನ್ನು ತನ್ನತ್ತ ಸೆಳೆಯಲು ದಿನಕ್ಕೊಂದು ಬೈಕಿನಲ್ಲಿ ಬರುತ್ತಿದ್ದ ಅಪ್ರಾಪ್ತ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಹೌದು, ಜೋರಾಗಿ ಸೌಂಡ್ ಮಾಡುತ್ತಾ ರೋಡಿನಲ್ಲಿ ರಾಯಲ್ ಆಗಿ ರಾಯಲ್ ಎನ್‍ಫೀಲ್ಡ್ ಬೈಕ್ ಏರಿ ಓಡಾಡೋ ಮಜಾನೇ ಬೇರೆ. ಅದರ ಸೌಂಡಿನಿಂದಲೇ ಎಲ್ಲರನ್ನ ತನ್ನತ್ತ ಸೆಳೆದು ಬಿಡೋದು ರಾಯಲ್ ಎನ್‍ಫೀಲ್ಡ್ ಬೈಕ್. ಹೀಗಾಗಿ ಕಾಲೇಜ್ ಹುಡುಗೀರನ್ನ ಪಟಾಯಿಸೋಕೆ ಮತ್ತು ಶೋಕಿ ಮಾಡೋಕೆ ಅಂತಲೇ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಯೊಬ್ಬ ಬುಲೆಟ್ ಬೈಕ್ ಕಳವು ಹುಚ್ಚು ಹಿಡಿಸಿಕೊಂಡಿದ್ದನು. ದಿನಕ್ಕೊಂದು ಬುಲೆಟ್ ಏರಿ ಕಾಲೇಜಿಗೆ ಬರುತ್ತಿದ್ದನು. ಹೀಗೆ ಕಾಲೇಜು ವಿದ್ಯಾರ್ಥಿನಿಯರ ಪಾಲಿನ ಹೀರೋ ಆಗಿದ್ದವ ಈಗ ಪೊಲೀಸರ ಅಥಿತಿಯಾಗಿದ್ದಾನೆ.
Advertisement
Advertisement
16 ವರ್ಷದ ಹುಡುಗ ದಿನಕ್ಕೊಂದು ಬುಲೆಟ್ ಬೈಕ್ ಏರಿ ಕಾಲೇಜಿಗೆ ಬರುವುದನ್ನೇ ಖಯಾಲಿ ಮಾಡಿಕೊಂಡಿದ್ದನು. ಹೀಗಾಗಿ ಕಣ್ಮುಂದೆ ಚೆನ್ನಾಗಿ ಕಾಣುವ ಬುಲೆಟ್ ಕಂಡರೆ ಸಾಕು ಕ್ಷಣ ಮಾತ್ರದಲ್ಲಿ ಎಗರಿಸುತ್ತಿದ್ದನು. ಕದ್ದ ಬೈಕಿನ ಸ್ಟಿಕ್ಕರ್, ಬಣ್ಣ ಹಾಗೂ ತರಹೇವಾರಿ ಡಿಸೈನ್ ಗಳ ಮೂಲಕ ಸ್ಟೈಲಿಶ್ ಆಗಿ ಅಲ್ಟ್ರೇಷನ್ ಮಾಡಿಸುತ್ತಿದ್ದನು. ಈಗಾಗಲೇ ಬೈಕಿಗೆ ಇರುವ ಸೌಂಡ್ ಸಾಲದು ಅಂತ ಎಕ್ಸ್ ಟ್ರಾ ಸೈಲೆನ್ಸರ್ ಹಾಕಿಸಿ ರೋಡಿಗಿಳಿಯುತ್ತಿದ್ದನು. ಈ ಅಪ್ರಾಪ್ತ ಕಳ್ಳನಿಗೆ ಅದೆಷ್ಟು ಧೈರ್ಯ ಅಂದರೆ ಕದ್ದ ಬೈಕ್‍ನ್ನ ಮಾಲೀಕನ ಕಣ್ಣೆದುರೇ ಓಡಿಸುತ್ತಿದ್ದನು ಎಂದು ಬೈಕ್ ಮಾಲೀಕ ಮಂಜುನಾಥ್ ಹೇಳಿದ್ದಾರೆ.
Advertisement
ಸದ್ಯ ಅಪ್ರಾಪ್ತ ಪೊಲೀಸರ ಅತಿಥಿಯಾಗಿದ್ದು, ವಿದ್ಯಾರ್ಥಿಯಿಂದ 4 ರಾಯಲ್ ಎನ್‍ಫೀಲ್ಡ್ ಬೈಕ್‍ಗಳನ್ನ ವಶಪಡಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
Advertisement