Bengaluru CityCrimeDistrictsLatestMain Post

ಹಾಡಹಗಲೇ ಬೆಂಗಳೂರಿನಲ್ಲಿ ಅಪ್ರಾಪ್ತೆಗೆ ಮುತ್ತಿಟ್ಟ ಯುವಕ

ಬೆಂಗಳೂರು: ಮೈಸೂರಿನಲ್ಲಿ ಗ್ಯಾಂಗ್ ರೇಪ್ ನಡೆದ ಬೆನ್ನಲ್ಲೇ ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ ನಡೆದಿದೆ. ಹಾಡಹಗಲೇ ನಾಲ್ವರು ಪುಂಡರ ಜೊತೆ ಬಂದಿದ್ದ ಓರ್ವ ಯುವಕ 16 ವರ್ಷದ ಅಪ್ರಾಪ್ತೆಯ ಮೇಲೆ ದಾಳಿ ನಡೆಸಿ ಮುತ್ತಿಟ್ಟಿದ್ದಾನೆ.

ಬೆಂಗಳೂರಿನಲ್ಲಿ ಶನಿವಾರ ಸಂಜೆ 4 ಗಂಟೆಗೆ ಈ ಘಟನೆ ನಡೆದಿದೆ. ಅಪ್ರಾಪ್ತೆ ಕಿರುಚಾಡ್ತಿದ್ದಂತೆ ಯುವಕ ಮುತ್ತು ಕೊಟ್ಟು ಪರಾರಿಯಾಗಿದ್ದಾನೆ. ಮುತ್ತು ನೀಡಿದ್ದು ಅಲ್ಲದೇ ಸೋಮವಾರ ಒಬ್ಬಳೇ ಸಿಗು ಎಂದು ವಾರ್ನಿಂಗ್ ನೀಡಿದ್ದಾನೆ. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

 

ಈ ಎಲ್ಲ ಘಟನೆಗಳು ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅಪ್ರಾಪ್ತೆ ದೊಡ್ಡಮ್ಮನ ಜೊತೆ ಬಾಡಿಗೆ ಮನೆಯಲ್ಲಿ ವಾಸವಿದ್ದು, ಘಟನೆಯ ಬಳಿಕ ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ದೌರ್ಜನ್ಯಕ್ಕೊಳಗಾದ ಅಪ್ರಾಪ್ತೆ ಮಾತನಾಡಿ, ಹೊರಗಡೆ ಓಡಾಡಲು ಭಯ ಆಗುತ್ತಿದೆ. ಅಲ್ಲಿ 4 ಹುಡುಗರು ನಿಂತಿದ್ದರು. ಒಬ್ಬ ಓಡೋಡಿ ಬಂದು ಮುತ್ತು ಕೊಟ್ಟ. ಒಬ್ಬ ಮುತ್ತು ನೀಡುವಾಗ 4 ಮಂದಿ ನಿಂತು ನೋಡುತ್ತಿದ್ದರು. ಕೆಲ ದಿನಗಳಿಂದ ನನ್ನನ್ನು ಫಾಲೋ ಮಾಡುತ್ತಿದ್ದ. ಆತ ಯಾರು ಏನು ಎನ್ನುವುದು ಗೊತ್ತಿಲ್ಲ ಎಂದು ಹೇಳಿದ್ದಾಳೆ. ಇದನ್ನೂ ಓದಿ: ನುಡಿದಂತೆ ನಡೆದ ಜಗ್ಗೇಶ್- 1 ಲಕ್ಷ ರೂ. ಚೆಕ್ ಹಸ್ತಾಂತರ

ಕುಟುಂಬಸ್ಥರು ಪ್ರತಿಕ್ರಿಯಿಸಿ, ಸ್ಥಳಕ್ಕೆ ಬಂದ ಪೊಲೀಸರು ನಾಮಕವಾಸ್ತೆ ಸ್ಥಳ ಮಹಜರು ಮಾಡಿದ್ದಾರೆ. ಕಿರುಕುಳ ಕೊಟ್ಟ ಯುವಕನ ಬಗ್ಗೆಯೂ ಪರಿಶೀಲನೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಇನ್ನೊಮ್ಮೆ ಕಿರುಕುಳ ಕೊಟ್ರೆ, ಫೋಟೋ ಕ್ಯಾಪ್ಚರ್ ಮಾಡಿ ಕಳುಹಿಸಿ ಎಂದು ಹೇಳಿರುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published.

Back to top button