ಆಗ್ರಾ: ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹುಡುಗನೊಬ್ಬ 5 ವರ್ಷದ ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
7 ವರ್ಷದ ವಿವೇಕ್(ಹಸರು ಬದಲಾಯಿಸಲಾಗಿದೆ) ಕೊಲೆ ಮಾಡಿರುವ ಆರೋಪಿ. ಎರಡು ವಾರಗಳ ಹಿಂದೆ ಈ ಕೊಲೆ ನಡೆದಿದ್ದು, ಸೋಮವಾರದಂದು ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಬಾಲಕನ ಮೃತದೇಹ 10 ದಿನಗಳ ಬಳಿಕ ಚರಂಡಿಯಲ್ಲಿ ಪತ್ತೆಯಾಗಿದೆ.
Advertisement
ಏನಿದು ಪ್ರಕರಣ: ವಿವೇಕ್‍ನ ಅಣ್ಣ 5 ವರ್ಷದ ಆಯುಶ್ ಎಂಬಾತನೊಂದಿಗೆ ಜಗಳ ಮಾಡಿಕೊಂಡಿದ್ದ. ಈ ವೇಳೆ ಆಯುಶ್ ಕಲ್ಲಿನಿಂದ ಹೊಡೆದಿದ್ದು, ವಿವೇಕ್ ಅಣ್ಣ ಗಾಯಗೊಂಡಿದ್ದ. ಈ ಬಗ್ಗೆ ವಿವೇಕ್ ಗೆ ಗೊತ್ತಾದ ನಂತರ ಹಲ್ಲೆಗೆ ಸೇಡು ತೀರಿಸಿಕೊಳ್ಳಲು ಯೋಚಿಸಿದ್ದ. ಮರುದಿನ ಆಯುಶ್ ಪೋಷಕರು ಇಲ್ಲದ ವೇಳೆ ವಿವೇಕ್ ಆತನಿಗೆ ಚಾಕ್ಲೇಟ್ ಕೊಡುವುದಾಗಿ ಪುಸಲಾಯಿಸಿ ತನ್ನೊಂದಿಗೆ ಕರೆದುಕೊಂಡು ಹೋಗಿದ್ದ.
Advertisement
Advertisement
ಆಯುಶ್ ಮನೆಗೆ ಹಿಂದಿರುಗದ ಕಾರಣ ಆತನ ತಂದೆ ಪಪ್ಪು ಯಾದವ್ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ನವೆಂಬರ್ 16ರಂದು ಪ್ರಕರಣ ದಾಖಲಿಸಿದ್ದರು. ಕೊನೆಯ ಬಾರಿಗೆ ವಿವೇಕ್‍ನೊಂದಿಗೆ ಆಯುಶ್ ಇದ್ದಿದ್ದನ್ನು ನೋಡಿದ್ದೆವು ಎಂದು ಅಕ್ಕಪಕ್ಕದ ಮನೆಯವರು ಹೇಳಿದ್ದರು. ಆದ್ರೆ ವಿವೇಕ್ ಆಯುಶ್‍ನನ್ನು ಅಂಗಡಿಯ ಬಳಿಯೇ ಬಿಟ್ಟು ಬಂದಿದ್ದಾಗಿ ಹೇಳಿದ್ದ. ಆದ್ರೆ ಅಲ್ಲೂ ಆಯುಶ್ ಪತ್ತೆಯಾಗಿರಲಿಲ್ಲ.
Advertisement
ನವೆಂಬರ್ 27ರಂದು ಫ್ಯಾಕ್ಟರಿ ನೌಕರರೊಬ್ಬರು ಚರಂಡಿಯಲ್ಲಿ ಬಾಲಕನ ಶವ ತೇಲುತ್ತಿದ್ದುದನ್ನು ನೋಡಿದ್ದರು. ನಂತರ ಅದು ಆಯುಶ್ ಶವ ಎಂದು ಗುರುತಿಸಲಾಗಿತ್ತು.
ಆಯುಶ್ ಕೊನೆಯ ಬಾರಿಗೆ ವಿವೇಕ್ ಜೊತೆ ಕಾಣಿಸಿಕೊಂಡಿದ್ದರಿಂದ ನಾವು ವಿವೇಕ್ ಹಾಗೂ ಆತನ ಪೋಷಕರನ್ನು ಕರೆತಂದು ವಿಚಾರಣೆ ಮಾಡಿದೆವು. ವಿವೇಕ್ ಆಯುಶ್‍ನನ್ನು ಚರಂಡಿಗೆ ತಳ್ಳಿದ್ದ. ಚರಂಡಿಯಲ್ಲಿ ಮುಳುಗಿ ಆಯುಶ್ ಸಾವನ್ನಪ್ಪಿದ್ದಾನೆಂದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ವಿವೇಕ್ ಮೊದಲು ನಮ್ಮ ದಾರಿ ತಪ್ಪಿಸಲು ಯತ್ನಿಸಿದ. ಕೊನೆಯದಾಗಿ ಮೊಹಮ್ಮದ್‍ಪುರದ ಮಹಿಳೆಯೊಬ್ಬರೊಂದಿಗೆ ಆಯುಶ್‍ನನ್ನು ನೋಡಿದ್ದಾಗಿ ಪೊಲೀಸಿರಿಗೆ ನಂಬಿಸಿದ್ದ. ಮಹಿಳೆಯ ಮನೆ ಮೇಲೆ ದಾಳಿ ಮಾಡಿದಾಗಲೂ ಆಯುಶ್ ಪತ್ತೆಯಾಗಿರಲಿಲ್ಲ. ಕಿಡ್ನಾಪ್ ಆಗಿರಬಹುದೆಂಬ ಶಂಕೆಯಿಂದ ತನಿಖೆ ಮಾಡಿದೆವು. ಆದ್ರೆ ಯಾವುದೇ ಸುಳಿವು ಸಿಗಲಿಲ್ಲ. ಇತ್ತ ವಿವೇಕ್ ಪದೇ ಪದೇ ತನ್ನ ಹೇಳಿಕೆಯನ್ನ ಬದಲಾಯಿಸುತ್ತಿದ್ದ. ಕೊನೆಗೆ ಕಟ್ಟುನಿಟ್ಟಾಗಿ ವಿಚಾರಣೆ ಮಾಡಿದಾಗ ಆಯುಶ್‍ನನ್ನು ಚರಂಡಿಗೆ ತಳ್ಳಿದ್ದಾಗಿ ಬಾಯ್ಬಿಟ್ಟಿದ್ದಾನೆ ಎಂದು ಸಿಓ ಶ್ಲೋಕ್ ಕುಮಾರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.
ಬಾಲಕನ ಹೇಳಿಕೆ ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಸೋಮವಾರದಂದು ಚರಂಡಿಯಿಂದ ಆಯುಶ್‍ನ ಕೊಳೆತ ಶವವನ್ನು ಪೊಲೀಸರು ಹೊರತೆಗೆಸಿದ್ದಾರೆ. ಆಯುಶ್ ತಂದೆ ಇ- ರಿಕ್ಷಾ ಚಾಲಕರಾಗಿದ್ದು, ವಿವೇಕ್ ತಂದೆ ಫ್ಯಾಕ್ಟರಿಯಲ್ಲಿ ದಿನಗೂಲಿ ಕಾರ್ಮಿಕರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.