ತಿರುವನಂತಪುರಂ: 3 ವಾರಗಳ ಹಿಂದೆ ಕಾಣೆಯಾಗಿದ್ದ ಅಪ್ರಾಪ್ತ ಬಾಲಕಿಯು 42 ವರ್ಷದ ವ್ಯಕ್ತಿಯ ಜೊತೆ ಕೇರಳದ (Kerala) ಪೈವಳಿಕೆಯಲ್ಲಿ (Paivalike) ಶವವಾಗಿ ಪತ್ತೆಯಾಗಿದ್ದಾಳೆ.
ಭಾನುವಾರ ಕೇರಳದ ಪೈವಳಿಕೆ ಗ್ರಾಮದಲ್ಲಿ 42 ವರ್ಷದ ವ್ಯಕ್ತಿಯ ಜೊತೆಗೆ ಶವವಾಗಿ ಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: 11 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ತಂದೆ ಅರೆಸ್ಟ್
ಪೈವಳಿಕೆ ಗ್ರಾಮದ ಬಾಲಕಿ ಫೆ. 11ರಂದು ನಾಪತ್ತೆಯಾಗಿದ್ದಳು. ಆಕೆಯ ಪತ್ತೆಗೆ ತನಿಖೆ ನಡೆಸಲಾಗುತ್ತಿತ್ತು. ಆಕೆಯ ಪೋಷಕರು, ಅದೇ ಸಮಯದಲ್ಲಿ ನಾಪತ್ತೆಯಾಗಿದ್ದ ನೆರೆಮನೆಯ ಪ್ರದೀಪ್ ಎಂದು ಗುರುತಿಸಲಾದ ವ್ಯಕ್ತಿಯ ವಿರುದ್ಧ ಆರೋಪಗಳನ್ನು ಹೊರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೇಜಸ್ವಿ ಸೂರ್ಯ, ಶಿವಶ್ರೀ ರಿಸೆಪ್ಷನ್ – ಸಿಎಂ, ಡಿಸಿಎಂ ಸೇರಿದಂತೆ ಗಣ್ಯರಿಂದ ನವದಂಪತಿಗೆ ಶುಭಹಾರೈಕೆ
ನಾಪತ್ತೆ ಆದಾಗಿನಿಂದ ಇಬ್ಬರ ಮೊಬೈಲ್ ಫೋನ್‌ಗಳು ಸ್ವಿಚ್‌ಆಫ್ ಆಗಿದ್ದವು. ಭಾನುವಾರ 52 ಮಂದಿಯಿದ್ದ ಪೊಲೀಸ್ ತಂಡಗಳು ವ್ಯಾಪಕವಾಗಿ ಹುಡುಕಾಟ ನಡೆಸಿದವು. ನೆರೆಮನೆಯ ಪ್ರದೀಪ್ ಹಾಗೂ ಬಾಲಕಿಯ ಮೃತದೇಹವು ಆಕೆಯ ಮನೆಯ ಸಮೀಪವಿರುವ ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹಾಸನ| ಪಾಳು ಬಿದ್ದಿದ್ದ ಕಟ್ಟಡ ಕುಸಿತ – ಬೀದಿಬದಿ ವ್ಯಾಪಾರ ಮಾಡ್ತಿದ್ದ ನಾಲ್ವರು ದುರ್ಮರಣ
ಕುಂಬ್ಳೆ ಪೊಲೀಸ್ ಠಾಣೆಯಲ್ಲಿ ಇಬ್ಬರ ನಾಪತ್ತೆ ಪ್ರಕರಣ ದಾಖಲಾಗಿತ್ತು.