Instagram ಪ್ರಿಯಕರನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16ರ ಹುಡುಗಿ ಅರೆಸ್ಟ್‌

Public TV
1 Min Read
Jaipur

ಜೈಪುರ: ಇನ್ಸ್ಟಾಗ್ರಾಮ್‌ನಲ್ಲಿ (Instagram) ಪರಿಚಯವಾಗಿದ್ದ ಗೆಳೆಯನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ (Pakistan) ಹೊರಟಿದ್ದ ರಾಜಸ್ಥಾನದ 16 ವರ್ಷದ ಹುಡುಗಿಯನ್ನ ಜೈಪುರ ವಿಮಾನ ನಿಲ್ದಾಣದಲ್ಲಿ (Jaipur Airport) ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಇತ್ತೀಚೆಗೆ ಆನ್‌ಲೈನ್‌ನಲ್ಲಿ (Online) ಪರಿಚಯವಾದ ಯುವಕ-ಯುವತಿಯರ ಪ್ರೇಮ ಪ್ರಕರಣಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಮತ್ತೊಂದು ಕೇಸ್‌ ಬೆಳಕಿಗೆ ಬಂದಿದೆ. ಅಂಜು ಎಂಬ ಭಾರತೀಯ ಮಹಿಳೆ ಇತ್ತೀಚಿಗೆ ಪಾಕಿಸ್ತಾನಕ್ಕೆ ತೆರಳಿ ಸ್ನೇಹಿತ ನಸ್ರುಲ್ಲಾ ಎಂಬವನನ್ನ ಮದುವೆಯಾದ ಸುದ್ದಿಯಾದ ಬೆನ್ನಲ್ಲೇ ರಾಜಸ್ಥಾನದ (Rajasthan) ಸಿಕರ್‌ ಜಿಲ್ಲೆಯ ಶ್ರೀಮಾಧೋಪುರ್‌ ಪ್ರದೇಶದ ನಿವಾಸಿ ಹುಡುಗಿ ತನ್ನ ಪ್ರಿಯಕರನ ಭೇಟಿಗೆ ದೇಶಬಿಟ್ಟು ಹೋಗಲು ಯತ್ನಿಸಿದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

Instagram

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಪ್ರೇಮಿ:
ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಪ್ರೇಮಿಯನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಲು ಹುಡುಗಿ ಮುಂದಾಗಿದ್ದಳು. ಇಬ್ಬರು ಸ್ನೇಹಿತರೊಂದಿಗೆ ಜೈಪುರ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆಕೆ, ಪಾಕಿಸ್ತಾನಕ್ಕೆ ಹೋಗಲು ಮುಂದಾದಾಗ ವಿಮಾನ ಟಿಕೆಟ್‌ ತೋರಿಸುವಂತೆ ಕೇಳಿದ್ದಾರೆ. ಅನುಮಾನಗೊಂಡ ಸಿಬ್ಬಂದಿ ವಿಚಾರಿಸಿದಾಗ ಹುಡುಗಿ ಸುಳ್ಳು ಹೇಳಿ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾಳೆ ಎಂಬ ಸಂಶಯ ಮೂಡಿದೆ. ನಂತರ ಆಕೆಯನ್ನ ಬಂಧಿಸಿ ವಿಚಾರಣೆ ನಡೆಸಲು ವಲಸೆ ವಿಭಾಗದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Lovers 2

ನಾನು ಪಾಕ್‌ ಪ್ರಜೆ ಎಂದಿದ್ದ ಹುಡುಗಿ:
ಟಿಕೆಟ್‌ ನೀಡಲು ಸಿಬ್ಬಂದಿ ನಿರಾಕರಿಸಿದಾಗ ತಾನು ಪಾಕಿಸ್ತಾನ ಪ್ರಜೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಲಾಹೋರ್‌ ಸಮೀಪದ ಇಸ್ಲಾಮಾಬಾದ್‌ ನಮ್ಮ ಊರು. 3 ವರ್ಷಗಳ ಹಿಂದೆ ಸಂಬಂಧಿಕರೊಂದಿಗೆ ಭಾರತಕ್ಕೆ ಬಂದಿದ್ದೆ. ಈಗ ವಾಪಸ್‌ ಹೋಗಬೇಕು ಎಂದು ತಿಳಿಸಿದ್ದಾಳೆ. ದಾಖಲೆ ಪರಿಶೀಲಿಸಿದಾಗ ಹುಡುಗಿ ಸುಳ್ಳು ಮಾಹಿತಿ ನೀಡಿದ್ದಾಳೆ ಎಂಬುದು ತಿಳಿದುಬಂದಿದೆ.

ನಿಲ್ದಾಣದಲ್ಲಿ ತೀವ್ರ ತಪಾಸಣೆ:
ನಿಲ್ದಾಣದ ಮಹಿಳಾ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಹುಡುಗಿ ರಾಜಸ್ಥಾನದ ಸಿಕರ್‌ ಜಿಲ್ಲೆಯ ಶ್ರೀಮಾಧೋಪುರಕ್ಕೆ ಸೇರಿದವಳು ಎಂಬ ಮಾಹಿತಿ ಪತ್ತೆಯಾಗಿದೆ. ಕೂಡಲೇ ಜೈಪುರ ನಗರ ಪೊಲೀಸರಿಗೆ ಮಾಹಿತಿ ನೀಡಿದ ವಿಮಾನ ನಿಲ್ದಾಣದ ಸಿಬ್ಬಂದಿ ಆಕೆಯನ್ನ ಪೊಲೀಸರಿಗೊಪ್ಪಿಸಿದ್ದಾರೆ.

Web Stories

Share This Article