ಕೋಲಾರ: ತಂದೆಯೇ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆಯೊಂದು ಕೋಲಾರದಲ್ಲಿ ಬೆಳಕಿಗೆ ಬಂದಿದೆ.
- Advertisement -
ಬಂಗಾರಪೇಟೆ ತಾಲೂಕು ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು. 36 ವರ್ಷದ ತಂದೆ ಆರೋಪಿ ಭಾಸ್ಕರ್‍ನನ್ನ ಪೊಲೀಸರು ಬಂಧಿಸಿ ಪ್ರಕರಣ ದಾಖಲು ಮಾಡಿದ್ದಾರೆ.
- Advertisement -
ತನ್ನ 14 ವರ್ಷದ ಮಗಳ ಮೇಲೆ ಕಳೆದ ಆರು ತಿಂಗಳಿಂದ ಮೂರ್ನಾಲ್ಕು ಬಾರಿ ತನ್ನ ಮುಂದೆ ಅತ್ಯಾಚಾರ ಮಾಡಿದ್ದಾನೆ. ಜೊತೆಗೆ ಭಾನುವಾರ ಕೂಡ ಅತ್ಯಾಚಾರಕ್ಕೆ ಯತ್ನಿಸಿದ, ಹಾಗಾಗಿ ಮನನೊಂದು ದೂರು ನೀಡಿದ್ದೇನೆ ಎಂದು ಬಾಲಕಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
- Advertisement -
- Advertisement -
ನನಗೆ ಇಂತಹ ನೀಚ ಗಂಡ ಬೇಡ, ಮಕ್ಕಳು ಮಾತ್ರ ಸಾಕು ಎಂದು ಪೊಲೀಸರಿಗೆ ನೀಡಿರುವ ನೀಡಿರುವ ದೂರಿನಲ್ಲಿ ನೊಂದ ತಾಯಿ ನೋವಿನಿಂದ ಹೇಳಿಕೊಂಡಿದ್ದಾರೆ.
ಬೇತಮಂಗಲ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.