ಕಲಬುರಗಿ: ಅಫಜಲಪುರ ತಾಲೂಕಿನ ಆಳಂದ ಗ್ರಾಮದಲ್ಲಿ ನಡೆದಿದ್ದ ಅತ್ಯಾಚಾರ (Rape), ಕೊಲೆ ಪ್ರಕರಣದ ತನಿಖಾ ವರದಿಯನ್ನು (Investigation Report) 9 ದಿನಗಳಲ್ಲೇ ಬಾಲ ನ್ಯಾಯಮಂಡಳಿಗೆ ಸಲ್ಲಿಸಲಾಗಿದೆ ಎಂದು ಎಸ್ಪಿ ಇಶಾ ಪಂತ್ (Isha Pant) ತಿಳಿಸಿದ್ದಾರೆ.
ನ.1ರಂದು ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಘಟನೆ ನಡೆದ 24 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು (Police) ಸಾಕ್ಷಿ ಸಮೇತ 9 ದಿನಗಳ ಒಳಗೇ ಬಾಲ ನ್ಯಾಯಮಂಡಳಿಗೆ ವರದಿ ಸಲ್ಲಿಸಲಾಗಿದೆ. ಇದನ್ನೂ ಓದಿ: ಬಯಲು ಬಹಿರ್ದೆಸೆಗೆ ತೆರಳಿದ್ದ ಬಾಲಕಿಯನ್ನು ರೇಪ್ ಮಾಡಿ ಕೊಲೆ
Advertisement
Advertisement
ಅಪರಾಧ ಕೃತ್ಯವೆಸಗಿದ ಬಾಲಕನನ್ನು ತನಿಖಾ ತಂಡ ಕೇವಲ 24 ಗಂಟೆಯಲ್ಲೇ ವಶಕ್ಕೆ ಪಡೆದು, ವಿಚಾರಣೆ ನಡೆಸಿ ಬಾಲ ನ್ಯಾಯ ಮಂಡಳಿ ಮುಂದೆ ಹಾಜರು ಪಡಿಸಲಾಗಿತ್ತು. ತನಿಖಾ ತಂಡದ ಕಾರ್ಯವನ್ನು ಮೆಚ್ಚಿ ಡಿಜಿ ಮತ್ತು ಐಜಿಪಿಯವರು 1 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ಟಿಪ್ಪು ಪ್ರತಿಮೆ ಪ್ರತಿಷ್ಠಾಪಿಸಿ ಊದುಬತ್ತಿ ಹಚ್ಚಿ, ಆರತಿ ಬೆಳಗ್ತಾರಾ ನೋಡೋಣ – ಪ್ರಹ್ಲಾದ್ ಜೋಶಿ ಟಾಂಗ್
Advertisement
Advertisement
ಶೇ.50 ಮೊತ್ತ ಬಾಲಕಿ ಕುಟುಂಬಕ್ಕೆ: ತನಿಖಾ ತಂಡಕ್ಕೆ ಡಿಜಿ (DGP) ಮತ್ತು ಐಜಿಪಿಯವರು (IGP) ಘೋಷಿಸಿದ 1 ಲಕ್ಷ ರೂ. ನಗದು ಬಹುಮಾನದ ಶೇ.50 ಮೊತ್ತವನ್ನು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ನೀಡಲು ತನಿಖಾ ತಂಡ ನಿರ್ಧರಿಸಿದೆ. ತನಿಖಾ ತಂಡ ಕಾರ್ಯವನ್ನು ಎಸ್ಪಿ ಇಶಾ ಪಂತ್ ಅವರು ಪ್ರಶಂಸಿಸಿದ್ದಾರೆ.