ChamarajanagarDistrictsKarnatakaLatestMain Post

ಅಪ್ರಾಪ್ತೆಯನ್ನು ಕಿಡ್ನ್ಯಾಪ್ ಮಾಡಿ, ಅತ್ಯಾಚಾರ

ಕೊಪ್ಪಳ: ಅಪ್ರಾಪ್ತ ಬಾಲಕಿಯನ್ನು ವಿವಾಹಿತನೋರ್ವ ಕಿಡ್ನ್ಯಾಪ್(Kidnap) ಮಾಡಿ, ಅತ್ಯಾಚಾರವನ್ನು ಮಾಡಿರುವ ಘಟನೆ ಕೊಪ್ಪಳದ(Koppala) ಗಂಗಾವತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಕೊಪ್ಪಳದ ಗಂಗಾವತಿಯ ಎಚ್‍ಆರ್‌ಎಸ್ ಕಾಲೋನಿಯ ನಿವಾಸಿ ಹುಲ್ಲೇಶ್ ಕಜ್ಜಿ ಎಂದು ಗುರುತಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯು ನಗರದ ಖಾಸಗಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಹುಲ್ಲೇಶ್ ಕಜ್ಜಿ ಪ್ರತಿನಿತ್ಯ ಬಾಲಕಿಯನ್ನು ಚುಡಾಯಿಸುವುದು, ರಸ್ತೆಗೆ ಅಡ್ಡ ನಿಂತು ಮಾತನಾಡಿಸುವುದು ಮಾಡುತ್ತಿದ್ದನು.

ಸೆ.7ರಂದು ಬಾಲಕಿಯು ಶಾಲೆಗೆ ಹೋಗುತ್ತಿದ್ದ ವೇಳೆಯಲ್ಲಿ ಮಾವನ ಸಹಾಯದಿಂದ ಹುಲ್ಲೇಶ್ ಬೈಕ್‍ನಲ್ಲಿ ಕಿಡ್ನ್ಯಾಪ್ ಮಾಡಿದ್ದಾನೆ. ಗಂಗಾವತಿ ಹೊರವಲಯದ ಸಿದ್ದಿಕೇರಿ ಸಮೀಪದ ವಾಣಿಭದ್ರೇಶ್ವರ ದೇವಸ್ಥಾನದ ಬಳಿಯ ಗುಡ್ಡದಲ್ಲಿ ಕರೆದುಕೊಂಡು ಹೋಗಿ, ಅಲ್ಲಿ ಹುಲ್ಲೇಶ್ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಎರಡು ದಿನಗಳ ಕಾಲ ಅಲ್ಲಿಯೇ ಇದ್ದಿದ್ದು ಸೆ. 9ರಂದು ಬಾಲಕಿಯನ್ನು ಗಂಗಾವತಿ ನಗರದ ಬಸ್ ನಿಲ್ದಾಣ ಬಳಿ ಬಿಟ್ಟು ಹೋಗಲಾಗಿದೆ. ಇದನ್ನೂ ಓದಿ: ಉಗ್ರನ ಶವವನ್ನು ಹೊರತೆಗೆದು ಅಂತ್ಯಸಂಸ್ಕಾರಕ್ಕೆ ಅವಕಾಶ ಕೋರಿದ್ದ ಅರ್ಜಿ ವಜಾ

ನಂತರ ಘಟನೆಗೆ ಸಂಬಂಧಿಸಿದಂತೆ ಬಾಲಕಿಯು ಮನೆಗೆ ಹೋಗಿ ಮಾಹಿತಿ ನೀಡಿದ್ದಾಳೆ. ಬಾಲಕಿಯ ತಾಯಿ ನೀಡಿದ ದೂರಿನ ಮೇರೆಗೆ ಗಂಗಾವತಿಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹುಲ್ಲೇಶ್ ಕಜ್ಜಿಯನ್ನು ಬಂಧಿಸಲಾಗಿದೆ.(Arrest) ಇದನ್ನೂ ಓದಿ: ಗಣೇಶನ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್ – 12 ಕೆಜಿ ಲಡ್ಡು 60 ಲಕ್ಷಕ್ಕೆ ಹರಾಜು

Live Tv

Leave a Reply

Your email address will not be published.

Back to top button